ಕಾಮನ್ ವೆಲ್ತ್ ನಲ್ಲಿ ಚಿನ್ನ ಗೆದ್ದ ಮಗಳು: ಸಂಭ್ರಮದಲ್ಲಿ ಸಿಹಿತಿಂಡಿ ಹಂಚಲೂ ಕಾಸಿಲ್ಲದ ತಂದೆ!

ನ್ಯೂಸ್ ಕನ್ನಡ ವರದಿ-(09.04.18): ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದ 69 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನವನ್ನು ತಂದುಕೊಡುವ ಮೂಲಕ ಉತ್ತರ ಪ್ರದೇಶದ ಪೂನಮ್ ಯಾದವ್ ಇಡೀ ದೇಶವನ್ನೇ ಸಂತೋಷದಲ್ಲಿ ಮುಳುಗಿಸಿದ್ದಾರೆ. ಆದರೆ ಆ ಸಂತೋಷ ಆಕೆಯ ಮನೆಯಲ್ಲಿ ಕಾಣುತ್ತಿಲ್ಲ ಕಾರಣ ಮಗಳು ಚಿನ್ನ ಪಡೆದ ಸಂತೋಷದಲ್ಲಿ ನೆರೆಯವರಿಗೆ ಹಂಚುವ ಸಲುವಾಗಿ ಸಿಹಿ ತಿಂಡಿ ತರಲು ತಂದೆಯಲ್ಲಿ ಹಣವಿಲ್ಲ!

ಹೌದು, ಬಹಳ ಕಷ್ಟದಲ್ಲೇ ಬೆಳೆದ ಪೂನಮ್ ಯಾದವ್ ಮನೆಯವರು ಮೂರು ಹೊತ್ತು ಸರಿಯಾಗಿ ಊಟ ಮಾಡಿದವರಲ್ಲ. ಮನೆಯಲ್ಲಿದ್ದ ಎಮ್ಮೆಯ ಹಾಲು ಪೂನಮ್ ಯಾದವ್ ಅವರ ವಿಧ್ಯಾಭ್ಯಾಸಕ್ಕೆ ಆಸರೆಯಾಗಿತ್ತು. ತಂದೆ ಮನೆ ಮನೆ ಮನೆಗೆ ಹಾಲು ಮಾರಿ ಮಗಳ ವಿಧ್ಯಾಭ್ಯಾಸಕ್ಕೆ ನೆರವಾಗುತ್ತಿದ್ದರು.ಮನೆ ಮಂದಿಯ ಕಷ್ಟವನ್ನು ನೋಡಲಾರದೇ ಪೂನಮ್ ತಂದೆ ಆ ಎಮ್ಮೆಯನ್ನೂ ಮಾರಿದರು. ಬಡತನದ ಕಾರಣದಿಂದ ಪೂನಮ್ ಹೊಟ್ಟೆ ತುಂಬಾ ಊಟ ಮಾಡುತ್ತಿರಲಿಲ್ಲವಂತೆ.

ಈ ಹಿಂದಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪೂನಮ್ ಕಂಚಿನ ಪದಕ ಪಡೆದಿದ್ದರು. ಇದರ ನಂತರ ಪೂನಮ್ ಅವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಜಲಾಗಿತ್ತು. ಏನೇ ಆಗಲಿ ಬಡತನ ಬೇಗೆಯಲ್ಲಿದ್ದರೂ ಸತತ ಪರಿಶ್ರಮದ ಮೂಲಕ ತನ್ನ ಪ್ರತಿಭೆಯನ್ನು ವಿಶ್ವಕ್ಕೆ ಪ್ರದರ್ಶಿಸಿ ಭಾರತದ ಕಿರೀಟಕ್ಕೆ ಮತ್ತೊಂದು ಯಶಸ್ಸಿನ ಗರಿಯನ್ನಿಟ್ಟ ಪೂನಮ್ ಯಾದವ್ ನಿಜಕ್ಕೂ ಪ್ರಶಂಸಾರ್ಹರು.

Leave a Reply

Your email address will not be published. Required fields are marked *