7 ಮಂದಿ ನೂತನ ಸಚಿವರಿಗೆ ಖಾತೆ ಹಂಚಿಕೆ ! ಸಿಕ್ಕಿದ ಖಾತೆ ಯಾವುದು…? 10 ಮಂದಿ ಸಚಿವರ ಖಾತೆ ಬದಲಾವಣೆ !

ಬೆಂಗಳೂರು: ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸೇರಿರುವ ನೂತನ 7 ಮಂದಿ ಸಚಿವರಿಗೆ ಇಂದು ಖಾತೆ ಹಂಚಿಕೆ ಮಾಡಲಾಗಿದ್ದು, ಜೊತೆಗೆ ಈಗಾಗಲೇ ಸಂಪುಟದಲ್ಲಿರುವ 10 ಮಂದಿ ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ. ಸಚಿವರ ಖಾತೆ ಬದಲಾವಣೆ, ಖಾತೆ ಹಂಚಿಕೆಯೊಂದಿಗೆ ಸಂಭಾವ್ಯ ನೂತನ ಪಟ್ಟಿಯನ್ನ ರಾಜಭವನಕ್ಕೆ ಕಳುಹಿಸಲಾಗಿದ್ದು ರಾಜ್ಯಪಾಲರ ಅಂಕಿತದ ಬಳಿಕ ಖಾತೆ ಹಂಚಿಕೆ ಅಧಿಕೃತ ವರದಿ ಹೊರಬೀಳಲಿದೆ.

ಸಿ.ಪಿ.ಯೋಗೇಶ್ವರ್ – ಸಣ್ಣ ನೀರಾವರಿ
ಆರ್. ಶಂಕರ್ – ಪೌರಾಡಳಿತ
ಎಂಟಿವಿ ನಾಗರಾಜ್ – ಅಬಕಾರಿ
ಮುರುಗೇಶ್ ನಿರಾಣಿ – ಖನಿಜ, ಗಣಿ ಮತ್ತು ಭೂ ವಿಜ್ಞಾನ
ಉಮೇಶ್ ಕತ್ತಿ- ಆಹಾರ ಮತ್ತು ನಾಗರಿಕ ಪೂರೈಕೆ
ಎಸ್. ಅಂಗಾರ- ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
ಅರವಿಂದ ಲಿಂಬಾವಳಿ – ಅರಣ್ಯ
ನಾರಾಯಣಗೌಡ – ಯುವಜನ ಮತ್ತು ಕ್ರೀಡೆ
ಸಿ. ಗೋಪಾಲಯ್ಯ – ತೋಟಗಾರಿಕೆ ಇಲಾಖೆ
ಆನಂದ್ ಸಿಂಗ್ – ಪ್ರವಾಸೋದ್ಯಮ
ಶಿವರಾಂ ಹೆಬ್ಬಾರ್ – ಕಾರ್ಮಿಕ
ಪ್ರಭು ಚವ್ಹಾಣ್ – ಪಶುಸಂಗೋಪನೆ
ಕೆ.ಸುಧಾಕರ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಬಸವರಾಜ ಬೊಮ್ಮಾಯಿ – ಗೃಹ ಮತ್ತು ಕಾನೂನು
ಜೆ.ಸಿ. ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ
ಸಿ.ಸಿ. ಪಾಟೀಲ್ – ಸಣ್ಣ ಕೈಗಾರಿಕೆ
ಕೋಟ ಶ್ರೀನಿವಾಸ ಪೂಜಾರಿ – ಮುಜರಾಯಿ

ಸಚಿವ ಮಾಧುಸ್ವಾಮಿಯವರಿಂದ ಕಾನೂನು ಖಾತೆ ಹಿಂಪಡೆದು ಬಸವಜರಾಜ ಬೊಮ್ಮಾಯಿ ಅವರಿಗೆ ಗೃಹ ಖಾತೆ ಜೊತೆಗೆ ಹೆಚ್ಚುವರಿಯಾಗಿ ಕಾನೂನು ಖಾತೆ ನೀಡಲಾಗಿದೆ. ಕೆ.ಸುಧಾಕರ್ ಅವರಿಂದ ವೈದ್ಯಕೀಯ ಶಿಕ್ಷಣ ಖಾತೆ ಹಿಂಪಡೆದು ಮಾಧುಸ್ವಾಮಿಗೆ ನೀಡಲಾಗಿದೆ.

Leave a Reply

Your email address will not be published. Required fields are marked *