ಸೊಳ್ಳೆ ಕಾಟಕ್ಕೆ ಇಲ್ಲಿದೆ ಪರಿಹಾರ….!
ಮನೆಯಲ್ಲೇ ಸುಲಭವಾಗಿ ಸಿಗುವ ಕರಿಬೇವಿನಿಂದ ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಒಂದು ಸೊಳ್ಳೆಯು ಇರುವುದಿಲ್ಲ. ಸೊಳ್ಳೆಗಳು ಕಚ್ಚುವುದರಿಂದ ನಾನಾ ರೀತಿಯ ರೋಗಗಳು ಬರುತ್ತದೆ. ಈ ಸೊಳ್ಳೆಗಳು ಮಳೆಗಾಲದಲ್ಲಿ ಜಾಸ್ತಿ ಕಣ್ಣಿಗೆ ಸಿಗುತ್ತೆ ಉಳಿದ ಕಾಲದಲ್ಲಿ ಇರುವುದಕ್ಕಿಂತ ಮಳೆಗಾಲದಲ್ಲಿ ಇನ್ನೂ ಹೆಚ್ಚು ಇರುತ್ತೆ ಆದ್ದರಿಂದ ಈ ಸೊಳ್ಳೆಗಳನ್ನು ಹೇಗೆ ಸುಲಭವಾಗಿ ಓಡಿಸಬಹುದು ಎನ್ನುವುದನ್ನು ನೋಡೋಣ. ಈ ಉಪಾಯ 100% ಕೆಲಸ ಮಾಡುತ್ತೆ. ಸೊಳ್ಳೆಗಳನ್ನು ಓಡಿಸಲು ಕರಿಬೇವಿನ ಎಲೆಗಳು ತುಂಬಾ ಸಹಾಯ ಮಾಡುತ್ತೆ ಏಕೆಂದರೆ ಕರಿಬೇವಿನ ಎಲೆಯಲ್ಲಿ ಇರುವ ವಾಸನೆಗೆ ಸೊಳ್ಳೆ ಓಡಿ ಹೋಗುತ್ತೆ. ಈ ಕರಿಬೇವಿನ ಮಾತ್ರೆ ಹೇಗೆ ತಯಾರಿಸುವುದು ನೋಡೋಣ.
ಕರಿಬೇವಿನ ಎಲೆಯನ್ನು ಮಿಕ್ಸಿ ಗೆ ಹಾಕಿ ಸ್ವಲ್ಪ ನೀರಿನೊಂದಿಗೆ ಇದನ್ನು ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಿ. ಸ್ವಲ್ಪವೇ ತೆಗೆದುಕೊಂಡು ಚಿಕ್ಕ ಉಂಡೆಗಳ ರೀತಿ ಮಾಡಿಕೊಳ್ಳಿ ನಂತರ ಇದನ್ನು ಬಿಸಿಲಿನಲ್ಲಿ ಒಣಗಿಸಿ ಎರಡು ದಿನಗಳ ವರೆಗೆ ಒಂದು ವೇಳೆ ಬಿಸಿಲು ಇಲ್ಲ ಅಂದರೆ ನೀವು ಒಳಗಡೆ ಕೂಡ ಒಣಗಿಸಬಹುದು. ಈ ಕರಿಬೇವಿನ ಮಾತ್ರೆಗಳು ಒಣಗಿದ ನಂತರ ಒಂದು ದೊಡ್ಡ ಚಮಚ ತೆಗೆದುಕೊಳ್ಳಿ ಇದರಲ್ಲಿ ಕರ್ಪೂರವನ್ನು ಹಾಕಿ ಇದರೊಂದಿಗೆ ಕರಿಬೇವಿನ ಮಾತ್ರೆಗಳನ್ನು ಸಹಾ ಅದರಲ್ಲಿ ಹಾಕಿರಿ ನಂತರ ಈ ಕರ್ಪೂರವನ್ನು ಉರಿಸಿ ಇದರಿಂದ ಹೋಗೆ ಬರುತ್ತದೆ. ಈ ಹೊಗೆಯಿಂದ ಸೊಳ್ಳೆಗಳು ಓಡಿ ಹೋಗುತ್ತೆ ಈ ಹೊಗೆಯನ್ನು ಸೊಳ್ಳೆಗಳಿಗೆ ಹಾಕುವುದರಿಂದ ಸೊಳ್ಳೆಗಳು ಮನೆ ಒಳಗೆ ಬರುವುದಿಲ್ಲ ಬಂದರೂ ಸಹಾ ಅವು ಸಾಯುತ್ತದೆ.
ಈ ಹೊಗೆಯನ್ನು ನೀವು ನಿಮ್ಮ ಮನೆಯ ಮೂಲೆ ಮೂಲೆಗಳಿಗೆ ಕೂಡ ಹಾಕಬಹುದು ಈ ಕರಿಬೇವಿನ ಉಪಾಯ ನಿಮಗೆ ಪ್ರತಿಶತ ಕೆಲಸ ಮಾಡುತ್ತದೆ ನಿಮಗೂ ಸಹ ಒಳ್ಳೆಯ ಫಲಿತಾಂಶ ಕೊಡುತ್ತದೆ. ಕೆಮಿಕಲ್ ಯುಕ್ತವಾದ ದ್ರವ್ಯವನ್ನು ನೀವು ಬಳಸುವುದರ ಬದಲು ಸ್ವಾಭಾವಿಕ ಆಗಿರುವ ಈ ರೀತಿ ಮಾತ್ರೆಗಳನ್ನು ಬಳಸಿ ಹೊಗೆ ಹಾಕುವುದರಿಂದ ಮನೆಗೆ ಸೊಳ್ಳೆಗಳು ಬರುವುದಿಲ್ಲ ಬಂದರೂ ಸಹಾ ಓಡಿ ಹೋಗುತ್ತದೆ. ಒಂದು ವೇಳೆ ನಿಮಗೆ ಕರಿಬೇವಿನ ಮಾತ್ರೆಗಳನ್ನು ಮಾಡಲು ಆಗಿಲ್ಲ ಅಂದರೆ ನೀವು ಕರಿಬೇವಿನ ಎಣ್ಣೆ ಬಳಸಬಹುದು ನೀವು ಮಾರುಕಟ್ಟೆಯಲ್ಲಿ ಈ ರೀತಿಯ ಎಣ್ಣೆ ಸಿಗುತ್ತೆ ಇದನ್ನು ಒಂದು ದೀಪದಲ್ಲಿ ಹಾಕಿ ಉರಿಸಿ ನೆನಪಿಡಿ ನೀವು ಒಂದೇ ದೀಪವನ್ನು ಹಚ್ಚಿ ಇಡೀ ಮನೆಯ ಸೊಳ್ಳೆಗಳು ಓಡಿ ಹೋಗುತ್ತೆ ಅಂದುಕೊಳ್ಳಬೇಡಿ ಯಾವ ರೂಮಿನಲ್ಲಿ ಹಚ್ಚುವಿರೋ ಅಲ್ಲಿ ಸೊಳ್ಳೆ ಹೋಗುತ್ತದೆ. ಯಾವ ರೂಮಿನಲ್ಲಿ ನೀವು ಈ ರೀತಿ ದೀಪವನ್ನು ಅಥವಾ ಮಾತ್ರೆಯನ್ನು ಹಚ್ಚಿ ಇಡುತ್ತಿರೋ ಕೇವಲ ಅಲ್ಲಿ ಮಾತ್ರ ಆ ರೂಮಿನ ಸೊಳ್ಳೆಗಳು ಅಷ್ಟೆ ಓಡಿ ಹೋಗುತ್ತವೆ. ನಿಮ್ಮ ಮನೆಯಲ್ಲೂ ಸಹಾ ಸೊಳ್ಳೆಗಳಿಂದ ಬೇಸತ್ತಿದ್ದರೆ ಈ ಎರಡು ಉಪಾಯಗಳನ್ನು ಅನುಸರಿಸಿ ನೋಡಿರಿ ನಿಮಗೆ ಆಶ್ಚರ್ಯ ಆಗುವುದು ಖಚಿತ.