ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಬೆಸ್ಟ್ ಟಿಪ್ಸ್ …..! ಈ ರೀತಿ ಮಾಡಿದರೆ ಗ್ಯಾಸ್ಟ್ರಿಕ್ ಸಮಸ್ಯೆನೇ ಬರಲ್ಲ…..

ಗ್ಯಾಸ್ಟ್ರಿಕ್ ಸಮಸ್ಯೆ ನಾವು ತಿನ್ನುವ ಆಹಾರ ಕ್ರಮದಿಂದ ಅಥವಾ ನಮ್ಮ ದೇಹದ ಪ್ರಕೃತಿಯಿಂದ ಬರುತ್ತದೆ. ಈ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಹೊಟ್ಟೆನೋವು ಎದೆಉರಿ ಅಷ್ಟೇ ಅಲ್ಲದೆ ಮುಜುಗರ ಕೂಡ ಉಂಟಾಗುತ್ತದೆ. ನಮ್ಮ ದೇಹದಲ್ಲಿ ಶೇಕರಣೆಯಾಗುವ ಬೆಡದ ಗಾಳಿ ಇದಕ್ಕೆ ಪ್ರಮುಖ ಕಾರಣ. ಇನ್ನು ಈ ರೀತಿ ಗಾಳಿ ಹೊರಹೋಗುವಾಗ ಉಂಟಾಗುವ ಶಬ್ದ ಕೇಳಿದಾಗ ಉಳಿದವರು ನಗುತ್ತಾರೆ ಅಥವಾ ವಾಸನೆಯಂದು ಮುಖ ಕಿವುಚುತ್ತಾರೆ. ಗ್ಯಾಸ್ಟ್ರಿಕ್ ಸಮಸ್ಯೆಯು ಸರಿಯಾದ ಸಮಯಕ್ಕೆ ಊಟ ಮಾಡದೆ ಹೋದರೆ ಮತ್ತು ಅತಿಯಾದ ಜಂಕ್ ಫುಡ್ಸ್ ತಿನ್ನುವುದರಿಂದ ನೀರು ಕಡಿಮೆ ಕುಡಿಯುವುದರಿಂದ ಕೆಲವೊಂದು ತರಕಾರಿಗಳನ್ನು ಪದೇ ಪದೇ ಸೇವಿಸುವುದರಿಂದ ಕೋಲ್ಡ್ ಡ್ರಿಂಕ್ಸ್ ಕುಡಿಯುವುದರಿಂದ ಇನ್ನು ಹಲವಾರು ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ.

ನಾವು ತಿಂದ ಆಹಾರವು ಸರಿಯಾದ ರೀತಿಯಲ್ಲಿ ಜೀರ್ಣವಾದರೆ ಈ ಒಂದು ಸಮಸ್ಯೆ ಬರುವುದಿಲ್ಲ. ಹಾಗಿದ್ದರೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಸುಲಭವಾಗಿ ಹೇಗೆ ಮುಕ್ತಿ ಪಡೆಯಬಹುದು ಎಂದು ಈಗ ತಿಳಿಯೋಣ. ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ಪಡೆಯಬಹುದು. ಅದೇನೆಂದರೆ ಒಂದು ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ ನೀರು ತಣ್ಣಗಾದ ಮೇಲೆ ಕುಡಿಯಬೇಕು. ಇನ್ನು ಟೀ ಮಾಡುವಾಗ ಸ್ವಲ್ಪ ಶುಂಠಿ ಹಾಕಿ ಕುದಿಸಿ ಕುಡಿದರೂ ಈ ಸಮಸ್ಯೆ ಪರಿಹಾರವಾಗುವುದು. ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ಈ ರೀತಿಯ ಗ್ಯಾಸ್ ಸಮಸ್ಯೆ ನಿವಾರಣೆಯಾಗಿ ಹೊಟ್ಟೆಯಲ್ಲಿರುವ ಬೇಡದ ಗ್ಯಾಸ ಮೂತ್ರದ ಮೂಲಕ ಹೊರ ಹೋಗುವುದು. ಹಾಗಾಗಿ ಒಂದು ದಿನಕ್ಕೆ 2 ರಿಂದ 3 ಲೀಟರ್ ನೀರು ಕುಡಿಯಲೇಬೇಕು. ಸೋಂಪು ಹೊಟ್ಟೆನೋವು ಅಜೀರ್ಣ ಮುಂತಾದ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ಮನೆಮದ್ದು. ಊಟದ ಮುಂಚೆ ಮತ್ತು ಊಟ ಆದ ನಂತರ ಸ್ವಲ್ಪ ಸೋಂಪು ತಿನ್ನುವ ಅಭ್ಯಾಸ ಗ್ಯಾಸ್ ಸಮಸ್ಯೆ ಇರುವವರಿಗೆ ಉತ್ತಮ.

ಇನ್ನು ಗ್ಯಾಸ್ ತುಂಬಿ ಹೊಟ್ಟೆನೋವು ಬಂದಾಗ 2 ಚಮಚ ಆಪಲ್ ಸೈಡರ್ ವಿನೆಗರನ್ನು 1 ಲೋಟ ಬಿಸಿನೀರಿಗೆ ಹಾಕಿ ಕುಡಿದರೆ ಗ್ಯಾಸ್ ನಿವಾರಣೆಯಾಗುತ್ತದೆ. ಕಾಲು ಚಮಚ ಅಡುಗೆ ಸೋಡವನ್ನು 1 ಲೋಟ ಬಿಸಿನೀರಿಗೆ ಹಾಕಿ ಕುಡಿದರೆ ತಕ್ಷಣವೇ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದು ಇನ್ನು ಇದಕ್ಕೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ಉತ್ತಮ.

ಪಲಾವ ಎಲೆಯನ್ನು 1 ಲೋಟ ನೀರಿಗೆ ಹಾಕಿ ಕುದಿಸಿ ಕುಡಿದರೆ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ. ಅಜೀರ್ಣ ಸಮಸ್ಯೆ ಇರುವವರು 2 ಲವಂಗವನ್ನು ಬಾಯಿಯಲ್ಲಿ ಜಗಿಯುತ್ತ ಒಂದು ಸಣ್ಣ ವಾಕ್ ಮಾಡಿದರೆ ಕೆಲವು ಸಮಯದ ಬಳಿಕ ಸಮಾಧಾನವಾಗುವುದು. ಗ್ಯಾಸ್ ಸಮಸ್ಯೆಯಿಂದ ಹೊಟ್ಟೆನೋವು ವಾಂತಿಯಾಗುವ ಲಕ್ಷಣವಿದ್ದರೆ ಹುರಿದ ಜೀರಿಗೆ ಕಾಳುಗಳ ಪುಡಿಯನ್ನು 1 ಲೋಟ ಬಿಸಿನೀರಿಗೆ ಹಾಕಿ ಕುಡಿಯಿರಿ ಇನ್ನು ಈ ಗ್ಯಾಸ್ ಸಮಸ್ಯೆಯಿಂದ ಹೊಟ್ಟೆಉರಿ ಆಗುವ ಸಂಭವವಿದ್ದರೆ ಸ್ವಲ್ಪ ಬೆಲ್ಲವನ್ನು ಸೇವಿಸಿ

ಬಿರಿಯಾನಿ ಅಥವಾ ಮಸಾಲ ಪಧಾರ್ಥಗಳನ್ನು ತಿನ್ನುವಾಗ ಅದರೊಂದಿಗೆ ರಾಯತಾವನ್ನು ಕಡ್ಡಾಯವಾಗಿ ಸೇವಿಸಿ. ಇನ್ನು ಈ ರಾಯತಕ್ಕೆ ಮೂಲಂಗಿ ಕೊತ್ತಂಬರಿ ಹಾಗೂ ಜೀರಿಗೆ ಪುಡಿ ಸೇರಿಸಬೇಕು. ಏಕೆಂದರೆ ಇದು ಜೀರ್ಣಕ್ರಿಯೆಗೆ ಉತ್ತಮ ಅಜೀರ್ಣ ಸಮಸ್ಯೆ ಇದ್ದವರು ಮಾಂಸಾಹಾರ ಸೇವಿಸಿದಾಗ 1 ಲೋಟ ಬಿಸಿನೀರನ್ನು ಕುಡಿಯಬೇಕು.ಇನ್ನು ತುಳಸಿ ಎಲೆ ಅಥವಾ ಪುದಿನವನ್ನು ಊಟದ ನಂತರ ಸೇವಿಸುವುದು ಇಲ್ಲವೇ ಇದರ ಟೀ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರಮಾಡಬಹುದು.

Leave a Reply

Your email address will not be published. Required fields are marked *