ಚೆನ್ನೈ ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಐಪಿಎಲ್ ಟೂರ್ನಿಯಿಂದಲೇ ಔಟ್! ಯಾರು ಗೊತ್ತೇ?
ನ್ಯೂಸ್ ಕನ್ನಡ ವರದಿ: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಮೆಂಟ್ ಎಂದೇ ಹೆಸರುವಾಸಿಯಾದ ಐಪಿಎಲ್ ಹೊಸ ಆವೃತ್ತಿ ಈಗಾಗಲೇ ಶುರುವಾಗಿದೆ. ಕ್ರಿಕೆಟ್ ಪ್ರಿಯರಿಗೆ ಹಬ್ಬವಾಗಿರುವ ಈ ಚುಟುಕು ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲೇ ರೋಚಕ ಜಯ ಸಾಧಿಸಿ ತಮ್ಮ ತಂಡದ ಮರುವಾಪಸಾತಿಯನ್ನು ತಮ್ಮದೇ ಶೈಲಿಯಲ್ಲಿ ಖಡಕ್ ಸಂದೇಶದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತೋರಿಸಿಕೊಟ್ಟಿತು. ಆದರೆ ಇದೀಗ ಅದೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಬಹುದೊಡ್ಡ ಹಿನ್ನಡೆಯಾಗಿದೆ. ಮಂಡಿಯ ಸ್ನಾಯುವಿನ ನೋವಿನಿಂದಾಗಿ ಪ್ರಮುಖ ಬ್ಯಾಟ್ಸ್’ಮೆನ್ ಕೇದಾರ್ ಜಾಧವ್ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 13ನೇ ಓವರ್’ನಲ್ಲಿ ಬ್ಯಾಟ್ ಮಾಡುವಾಗ ಗಾಯದ ಸಮಸ್ಯೆಯಿಂದ ನಿವೃತ್ತಿ ಹೊಂದಿದ್ದರು. ನೋವಿದ್ದರೂ ಕೊನೆಯ ಓವರಿನಲ್ಲಿ ಮತ್ತೆ ಆಡಳಿಕ್ಕೆ ಇಳಿದು ಸಿಕ್ಸರ್ ಬಾರಿಸುವ ಮೂಲಕ ತಂಡದ ರೋಚಕ ಗೆಲುವಿಗೆ ಕಾರಣರಾಗಿದ್ದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಮೈಕಲ್ ಹಸ್ಸಿ ‘ನಮ್ಮ ತಂಡಕ್ಕೆ ದೊಡ್ಡ ನಷ್ಟ. ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್’ಮೆನ್ ತಂಡದಿಂದ ಹೊರಗುಳಿಯುತ್ತಿರುವುದು ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.