ಕೋಮುವಾದಿಗಳನ್ನು ಸರ್ವಾಧಿಕಾರಿಯಾಗಲು ಬಿಡಲೇಬಾರದು: ಪ್ರಕಾಶ್ ರೈ
ನ್ಯೂಸ್ ಕನ್ನಡ ವರದಿ-(09.04.18): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುತ್ತಲೇ ಬಂದಿರುವ ದಕ್ಷಿಣ ಭಾರತದ ಖ್ಯಾತ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಜನ್ಮಶತಮಾನೋತ್ಸವ ಸಮಿತಿಯು ಆಯೋಜಿಸಿದ್ದ ದೊರೆಸ್ವಾಮಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಸದ್ಯ ಕೋಮುವಾದಿಗಳೆಲ್ಲಾ ಸರ್ವಾಧಿಕಾರಿಯಾಗಲು ಹೊಟಿದ್ದಾರೆ. ಆದರೆ ನಾವದನ್ನು ತಡೆದು ನಮ್ಮ ಭಾರತ ದೇಶವನ್ನು ಸೌಹಾರ್ದಯುತ ದೇಶವನ್ನಾಗಿ ಮಾರ್ಪಾಡು ಮಾಡಬೇಕು ಎಂದು ಅವರು ಹೇಳಿದರು.
ಬಂಡೀಪುರಕ್ಕೆ ಹೋಗಿದ್ದಾಗ ದೊಡ್ಡ ಸಂಪಿಗೆ ಮರ ನೋಡಿದ್ದೆ. ಆ ಮರ ತನ್ನ ಬದುಕಿನಲ್ಲಿ ಎಷ್ಟೆಲ್ಲಾ ವಸಂತ, ಮಳೆಯನ್ನು ನೋಡಿದೆ. ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡಿರುತ್ತದೆ ಎಂಬ ಯೋಚನಾ ಲಹರಿಗೆ ಜಾರಿದ್ದೆ. ಮರದ ಕೆಳಗೆ ಹೋದರೆ ತಾಯಿಯ ಮಡಿಲಿನಂತಹ ಸಾಂತ್ವನ ಸಿಗುತ್ತದೆ. ನಂಬಿಕೆ, ವಿಶ್ವಾಸ ಸಿಗುತ್ತದೆ. ಅದೇ ರೀತಿ ದೊರೆಸ್ವಾಮಿ ಎಂದು ಬಣ್ಣಿಸಿದರು. ದೊರೆಸ್ವಾಮಿ ಅವರ ಜತೆ ಒಟನಾಟ ಹೆಚ್ಚಾಗಿಲ್ಲ. ಆದರೆ, ದೂರದಿಂದ ನೋಡಿ ಕಲಿತಿದ್ದೇನೆ ಏಕಲವ್ಯನಂತೆ ಎಂದು ಪ್ರಕಾಶ ರೈ ಹೇಳಿದರು.