ನನ್ನ ಮಗ ಭಾರತೀಯ ಹಾಕಿ ತಂಡವನ್ನು ಪ್ರತಿನಿಧಿಸಬೇಕು: ಶಾರೂಖ್ ಖಾನ್

ನ್ಯೂಸ್ ಕನ್ನಡ ವರದಿ-(10.04.18): ಭಾರತೀಯ ಚಿತ್ರರಂಗದ ಖ್ಯಾತ ನಟ, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲಕರಾಗಿರುವ ಶಾರೂಖ್ ಖಾನ್ ತಮ್ಮ ಮನದಾಳದ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ನನ್ನ ಕೊನೆಯ ಮಗ ಅಬ್ರಾಮ್ ಭಾರತೀಯ ಹಾಕಿ ತಂಡವನ್ನು ಪ್ರತಿನಿಧಿಸಬೇಕೆಂಬುವುದೇ ನನ್ನ ಆಸೆ, ಆತ ಜಾಗತಿಕ ಮಟ್ಟದ ಆಟಗಾರನಾಗಬೇಕು ಎಂದು ಅವರು ಹೇಳಿದ್ದಾರೆ. ಮೊನ್ನೆ ನಡೆದ ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಶಾರೂಖ್ ಖಾನ್ ತಮ್ಮ ಪುತ್ರಿ ಸುಹಾನಾ ಹಾಗೂ ಪುತ್ರ ಅಬ್ರಾಮ್ ಜತೆ ಪಂದ್ಯ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾರೂಖ್ ಖಾನ್, ಅಬ್ರಾಮ್ ಕ್ರಿಕೆಟ್ ಆಡಲು ಇನ್ನೂ ಪ್ರಾರಂಭಿಸಿಲ್ಲ. ಸದ್ಯ ಆತ ಫುಟ್ ಬಾಲ್ ಆಡುತ್ತಿದ್ದಾನೆ. ಆತ ಭಾರತದ ಪರವಾಗಿ ಹಾಕಿ ಆಡಬೇಕು ಎನ್ನುವುದೇ ನನ್ನ ಆಗ್ರಹ ಎಂದು ಅವರು ಹೇಳಿದರು. ಶಾರೂಖ್ ಖಾನ್ ಚಕ್ ದೇ ಇಂಡಿಯಾ ಸಿನಿಮಾದಲ್ಲಿ ಹಾಕಿ ಕೋಚ್ ಪಾತ್ರ ನಿರ್ವಹಿಸಿದ್ದರು.

Leave a Reply

Your email address will not be published. Required fields are marked *