ಕುಸಿದ ಕಟ್ಟಡ: 20 ಮಂದಿ ವಿದ್ಯಾರ್ಥಿಗಳನ್ನು ರಕ್ಷಿಸಿ ಮೃತಪಟ್ಟ ಬಾಲಕ ಅಶ್ಫಾಕ್!

ನ್ಯೂಸ್ ಕನ್ನಡ ವರದಿ-(10.04.18): ರಾಜಸ್ಥಾನದ ಮೇವಾಡದಲ್ಲಿ ಮದ್ರಸಾದ ಕಟ್ಟಡವೊಂದು ಕುಸಿದಿದ್ದು, ಬಾಲಕನೊಬ್ಬನ ಸಮಯಪ್ರಜ್ಞೆಯಿಂದಾಗಿ 20 ಮಂದಿ ಮಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ದುರದೃಷ್ಟವಶಾತ್ ಬಾಲಕ ಇತರರ ಜೀವ ರಕ್ಷಿಸಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮೃತ ಬಾಲಕನನ್ನು ಅಶ್ಫಾಕ್ ಎಂದು ಗುರುತಿಸಲಾಗಿದೆ. ಮದ್ರಸಾದ ಕಟ್ಟಡವೊಂದು ಕುಸಿಯುತ್ತಿದ್ದ ಸಂದರ್ಭದಲ್ಲಿ ಅಶ್ಫಾಕ್ ಎಂಬ ಬಾಲಕ ಎಲ್ಲರೂ ಪಾರಾಗಲಿ ಎಂಬ ಕಾರಣದಿಂದ ಜೋರಾಗಿ ಕಿರುಚಿಕೊಂಡಿದ್ದಾನೆ. ಈ ವೇಳೆ ಉಳಿದ ವಿದ್ಯಾರ್ಥಿಗಳೆಲ್ಲಾ ಪಾರಾಗಿದ್ದು, ಅಶ್ಫಾಕ್ ಮೃತಪಟ್ಟಿದ್ದಾನೆ.

ಶುಕ್ರವಾರದಂದು ಮಸೀದಿಯಲ್ಲಿ ಜುಮಾ ನಮಾಝ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಚಂಡಮಾರುತ ಬಿಸಿದ್ದು, ಅಲ್ಲೇ ಇದ್ದ ಮಸದ್ರಸಾದ ಕಟ್ಟಡದ ಚಾವಣಿಯೊಂದು ಕುಸಿದಿತ್ತು. ಈ ವೇಳೆ ಬಾಲಕ ಅಶ್ಫಾಕ್ ಜೋರಾಗಿ ಕಿರುಚಿಕೊಂಡಿದ್ದರ ಪರಿಣಾಮ ಹಲವು ವಿದ್ಯಾರ್ಥಿಗಳು ಕಟ್ಟಡದಿಂದ ಹೊರಗೆ ಓಡಿಕೊಂಡು ಬಂದಿದ್ದಾರೆ. “ನನ್ನ ಮಗನ ಮರಣದಲ್ಲಿ ನಮಗೆ ಹೆಮ್ಮೆಯಿದೆ. ಆತ ಹಲವು ಮಂದಿಯ ಪ್ರಾಣವನ್ನು ಉಳಿಸಿ ತನ್ನ ಪ್ರಾಣತ್ಯಾಗ ಮಾಡಿದ್ದಾನೆ ಎಂದು ವಿದ್ಯಾರ್ಥಿಯ ಪೋಷಕರು ಹೇಳಿದ್ದಾರೆ.

Leave a Reply

Your email address will not be published. Required fields are marked *