ಹಿಂದೂ ಮಹಿಳೆಯ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಮಾನವೀಯತೆ ಮೆರೆದ ಕಾಶ್ಮೀರದ ಮುಸಲ್ಮಾನರು

ನ್ಯೂಸ್ ಕನ್ನಡ ವರದಿ(10-04-2018): ಸದಾ ಭಯೋತ್ಪಾಧನೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯದಿಂದ ಕೂಡಿದ ದುಖಕರವಾದ ಬದುಕಿನ ನಡುವೆಯೂ ಕಾಶ್ಮೀರದ ಬಾರಾಮುಲ್ಲಾದಲ್ಲಿನ ಮುಸಲ್ಮಾನರು ಹಿಂದೂ ಮಹಿಳೆಯ ಅಂತಿಮ ಸಂಸ್ಕಾರವನ್ನು ನೆರವೇರಿಸುವ ಮೂಲಕ ಮಾನವೀಯತಯನ್ನು ಮೆರೆದಿದ್ದಾರೆ.

ಕಾಶ್ಮೀರದ ಬಾರಮುಲ್ಲಾ ಎಂಬಲ್ಲಿ ಕಾಶ್ಮೀರಿ ಪಂಡಿತ ಕುಟುಂಬದ ನರೇಂದ್ರನಾಥ್ ಕೋಲಾ ಅವರ ಪತ್ನಿ ದುಲಾರಿ ಕೋಲ ಅವರು ನಿನ್ನೆ ನಿಧನರಾಗಿದ್ದರು. ಸುದ್ದಿ ತಿಳಿದ ತಕ್ಷಣ ಅಲ್ಲಿನ ಮುಸಲ್ಮಾನರು ಕೋಲಾ ಕುಟುಂಬಕ್ಕೆ ಸಾಂತ್ವಾನ ಹೇಳಿ ದುಲಾರಿ ಕೋಲಾ ಅವರ ಅಂತಿಮ ಸಂಸ್ಕಾರಕ್ಕೆ ಸರ್ವ ಸಿದ್ಧತೆಗಳನ್ನು ನಡೆಸಿ ಶವವನ್ನು ತಮ್ಮದೇ ಹೆಗಲಲ್ಲಿ ಹೊತ್ತು ಸ್ಮಶಾನಕ್ಕೆ ಸಾಗಿಸಿ ಶವವನ್ನು ಸುಡುವವರೆಗೆ ಅಲ್ಲಿಯೇ ನಿಂತು ಸಹಕರಿಸಿದರು. 90ರ ದಶಕದಲ್ಲಿ ಕಾಶ್ಮೀರಿ ಪಂಡಿತರು ಮುಸಲ್ಮಾನರೊಡನೆ ಬಾಂಧವ್ಯವನ್ನು ತೊರೆದು ಕಾಶ್ಮೀರವನ್ನು ತೊರೆದ ಸಂದರ್ಭದಲ್ಲಿ ಕೋಲಾರವರ ಕುಟುಂಬವು ತಮ್ಮ ಊರನ್ನು ತೊರೆಯದೇ ಅಲ್ಲೇ ವಾಸಿಸುತ್ತಿದ್ದವು. ಅಲ್ಲದೆ ಸ್ಥಳೀಯ ಮುಸಲ್ಮಾನರೊಡನೆ ಉತ್ತಮ ಬಾಂಧವ್ಯವನ್ನು ಹೊಂದಿದ್ದವು. ಈ ಕಾರಣದಿಂದಾಗಿ ಅಲ್ಲಿನ ಮುಸಲ್ಮಾನರೂ ಕೂಡ ಕೋಲಾ ಕುಟುಂಬವನ್ನು ಬಹಳ ಪ್ರೀತಿಸುತ್ತಿದ್ದರು.

ಒಟ್ಟಿನಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಸದಾ ಕಚ್ಚಾಡುವವರಿಗೆ ಕಾಶ್ಮೀರದ ಮುಸಲ್ಮಾನರು ಹಿಂದೂ ಮಹಿಳೆಯ ಅಂತಿಮ ಸಂಸ್ಕಾರವನ್ನು ನೆರವೇರಿಸುವ ಮೂಲಕ ಮಾನವೀಯತೆಯ ಪಾಠವನ್ನು ಕಲಿಸಿ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *