ಆಟೋ ಚಾಲಕರ ಸಮಸ್ಯೆ ತಿಳಿಯಲು ಆಟೋದಲ್ಲಿ ಪ್ರಯಾಣಿಸಿದ ಯಡಿಯೂರಪ್ಪ!

ನ್ಯೂಸ್ ಕನ್ನಡ ವರದಿ(10-04-2018): ಆಟೋ ಚಾಲಕನೊಬ್ಬನ ಆಟೋದಲ್ಲಿ ಪ್ರಯಾಣಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಯನ್ನು ತಿಳಿಯಲು ಪ್ರತ್ನಿಸಿದ ಘಟನೆ ವರದಿಯಾಗಿದೆ. ಬೆಂಗಳೂರಿನ ತಮ್ಮ ಡಾಲರ್ಸ್ ಕಾಲನಿ ನಿವಾಸದಿಂದ ಶಿವಾಜಿ ನಗರದ ವರೆಗೆ ಬಾಲಕೃಷ್ಣ ಎಂಬವರ ಆಟೋದಲ್ಲಿ ಸಂಚರಿಸಿದ ಯಡಿಯೂರಪ್ಪ, ಪ್ರಯಾಣದುದ್ದಕ್ಕೂ ಆಟೋ ಚಾಲಕನನ್ನು ಮಾತಿಗೆಳೆದು ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಂಡರು.

ಬಳಿಕ ಶಿವಾಜಿ ನಗರದ ಜಸ್ಮಾ ಭವನದಲ್ಲಿ ಆಟೋ ಚಾಲಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಆಟೋ ಚಾಲಕರಿಗೆ ಬಡಾವಣೆಗಳನ್ನು ನಿರ್ಮಿಸಿ ಮನೆಗಳನ್ನು ವಿತರಿಸುವುದಾಗಿ ಭರವಸೆ ನೀಡಿದರು.

ಆಟೊ ಚಾಲಕರ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು. ಕೇಂದ್ರದ ಆಯುಷ್ಮಾನ್‌ ಆರೋಗ್ಯ ವಿಮೆ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗುವುದು. ಚಾಲಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೊತೆಗಿದ್ದರು.

Leave a Reply

Your email address will not be published. Required fields are marked *