ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಅರಮನೆಯಂತಹ ಕಚೇರಿ ನಿರ್ಮಿಸಿದೆ; ಆದರೆ ಶ್ರೀರಾಮ ಈಗಲೂ ಡೇರೆಯಲ್ಲಿದ್ದಾನೆ: ಹಾರ್ದಿಕ್ ಪಟೇಲ್

ನ್ಯೂಸ್ ಕನ್ನಡ ವರದಿ(10-04-2018): ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷವು ದೆಹಲಿಯಲ್ಲಿ ಅರಮನೆಯಂತಹ ಪಕ್ಷದ ಕಚೇರಿ ನಿರ್ಮಿಸಿದೆ, ಆದರೆ ಆ ರಾಮನನ್ನು ಈಗಲೂ ಡೇರೆಯಲ್ಲಿಟ್ಟಿದ್ದಾರೆ ಎಂದು ಪಾಟೀದಾರ್ ಚಳುವಳಿ ನಾಯಕ ಹಾರ್ದಿಕ್ ಪಟೇಲ್ ಬಿಜೆಪಿಯನ್ನು ಟೀಕಿಸಿದ್ದಾರೆ.

ಮಧ್ಯಪ್ರದೇಶದ ಬುಂದೇಲ್ಕಂಡದಲ್ಲಿ ಕಿಸಾನ್ ಕ್ರಾಂತಿ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಢೋಂಗಿ ರಾಮನ ಮೇಲೆ ನಮಗೆ ಬೇಕಿಲ್ಲ ನಿಜವಾದ ಶ್ರೀರಾಮನಲ್ಲಿ ನಮಗೆ ವಿಶ್ವಾಸವಿದೆ. ಹಿಂದೂ ವೋಟ್ ಬ್ಯಾಂಕ್ ಮೂಲಕ ಶ್ರೀರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷಕ್ಕೆ ಇದುವರೆಗೆ ಶ್ರೀರಾಮನಿಗೆ ಮಂದಿರವನ್ನು ನಿರ್ಮಿಸಲು ಆಗಿಲ್ಲ ಆದರೆ ತಮ್ಮ ಪಕ್ಷಕ್ಕೆ ಅರಮನೆಯಂತಹ ಕಚೇರಿ ಸ್ಥಾಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

24 ವರ್ಷ ತುಂಬುತ್ತಿರುವ ನನಗೆ ಹೆದರಿ ನನ್ನ ಮೇಲೆ ಮಸಿ ಚೆಲ್ಲುತ್ತಾರೆ. ಈ ಸಣ್ಣ ಹುಡುಗನಿಗೆ ಬಿಜೆಪಿಯವರು ಯಾಕೆ ಇಷ್ಟೊಂದು ಹೆದರುತ್ತಾರೆ ಎಂದು ತನ್ನ ಮೇಲೆ ಶಾಯಿ ಚೆಲ್ಲಿದ ಬಿಜೆಪಿ ಕಾರ್ಯಕರ್ತರನ್ನು ಕೆಣಕಿದರು.

Leave a Reply

Your email address will not be published. Required fields are marked *