ಎಸ್.ಎಂ.ಕೃಷ್ಣ ಮತ್ತೆ ಕಾಂಗ್ರೆಸಿಗೆ?: ತೆರೆಮರೆಯಲ್ಲಿ ನಡೆಯುತ್ತಿದೆ ಘರ್ವಾಪಸಿ ಪ್ರಯತ್ನ

ನ್ಯೂಸ್ ಕನ್ನಡ ವರದಿ(10-04-2018): ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಂಗ್ರೆಸ್ ಪಕ್ಷಕ್ಕೆ ವಾಪಾಸಾಗಲಿದ್ದಾರೆಯೇ? ಹೌದು ಈಗೊಂದು ಮಾತು ಕೇಳಿಬರುತ್ತಿದೆ ಖಚಿತ ಮೂಲಗಳ ಪ್ರಕಾರ ಇದಕ್ಕೆ ಪೂರಕವೆಂಬಂತೆ ಅವರನ್ನು ಕಾಂಗ್ರೆಸಿಗೆ ಮರಳಿ ತರಲು ತೆರೆಮರೆಯ ಪ್ರಯತ್ನಗಳು ನಡೆಯುತ್ತಿದೆ.

ಕೆಲ ತಿಂಗಳ ಹಿಂದೆಯಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಭರ್ಜರಿಯಾಗಿ ಬಿಜೆಪಿ ಪಕ್ಷ ಸೇರಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಿಜೆಪಿಯಿಂದ ಭೃಮ ನಿರಶನಗೊಂಡು ಮತ್ತೆ ಕಾಂಗ್ರೆಸಿನತ್ತ ಮುಖಮಾಡುತ್ತಿದ್ದಾರೆ. ಈಗಾಗಲೇ ಈ ಕುರಿತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರೊಂದಿಗೆ ಎಸ್ಎಂಕೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಎಸ್ಎಂಕೆ ಪಕ್ಷಕ್ಕೆ ಮರಳಿ ಕರೆತರಲು ಡಿ.ಕೆ.ಶಿವಕುಮಾರ್ ಮುತುವರ್ಜಿ ವಹಿಸಿದ್ದು ಈ ಕುರಿತು ಮಾತುಕತೆಗಳು ನಡೆಯುತ್ತಿದೆ. ಅಲ್ಲದೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕೂಡ ಈ ಕುರಿತು ಪೂರಕವಾಗಿ ಪ್ರತಿಕೃಯಿಸಿದ್ದಾರೆ ಎನ್ನಲಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ವಿಧಾನ ಸಭಾ ಚುವಾವಣೆಗೂ ಮೊದಲೇ ಎಸ್.ಎಂ.ಕೃಷ್ಣ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಲಿದೆ.

Leave a Reply

Your email address will not be published. Required fields are marked *