ಎದೆಹಾಲು ಮಾರಿ ಲಕ್ಷ ಲಕ್ಷ ರೂ. ಗಳಿಸುವ ಮಹಿಳೆ! ಯಾರಿಗೆ ಮಾರುತ್ತಿರುವುದು ಗೊತ್ತೇ?!
ನ್ಯೂಸ್ ಕನ್ನಡ ವರದಿ: ಹೌದು ನೀವು ನಂಬಲೇಬೇಕು. ಪ್ರಪಂಚದಾದ್ಯಂತ ವೈರಲ್ ಆಗಿರುವ ಸುದ್ದಿ ಇದು. ಮಕ್ಕಳಿಗೆ ತಾಯಿ ಹಾಲು ತುಂಬಾ ಅಮೂಲ್ಯವಾದದ್ದು. ತಾಯಿ ಹಾಲು ಮಗುವಿಗೆ ಸರಿಯಾಗಿ ದೊರೆಯದಿದ್ದರೆ ಅದರ ಬೆಳವಣಿಗೆ ಹಾಗು ಬುದ್ಧಿಶಕ್ತಿ ಕುಂಠಿತವಾಗುತ್ತದೆ ಎಂಬುದು ವೈದ್ಯಕೀಯ ಮತ್ತು ವಿಜ್ಞಾನದ ಮಾತು. ಆದರೆ ಇಲ್ಲರ್ವ ಮಹಿಳೆ ತನ್ನ ಎದೆ ಹಾಲನ್ನು ಬಾಡಿ ಬಿಲ್ಡರ್ಗಳಿಗೆ ಮಾರಾಟ ಮಾಡಿ ಲಕ್ಷ ಲಕ್ಷ ರೂಪಾಯಿ ಗಳಿಸುತ್ತಿದ್ದಾಳೆ.
ಸೈಪ್ರಸ್ ದೇಶದಲ್ಲಿ ಎರಡು ಮಕ್ಕಳ ತಾಯಿ ರಾಫೆಲಾ ಲ್ಯಾಂಪ್ರೊಗೆ ಕಳೆದ ಕೆಲ ತಿಂಗಳ ಹಿಂದೆ ಗಂಡು ಮಗುವಾಗಿತ್ತು. ಮಗುವಿಗೆ ಈಗ 7 ತಿಂಗಳು. ಅಗತ್ಯಕ್ಕಿಂತಲೂ ಹೆಚ್ಚು ಎದೆ ಹಾಲು ಉತ್ಪತ್ತಿಯಾಗುತ್ತಿರುವುದರಿಂದ ಅದನ್ನು ಎದೆ ಹಾಲು ಕಡಿಮೆ ಇರುವ ತಾಯಂದಿರಿಗೆ ಕೊಡುತ್ತಿದ್ದಳು. ನಂತರ ಬಾಡಿ ಬಿಲ್ಡರ್ಗಳಿಂದ ಎದೆ ಹಾಲಿಗೆ ಬೇಡಿಕೆ ಬಂದಿತ್ತು ಎನ್ನಲಾಗಿದೆ.
ತಾಯಿಯ ಎದೆ ಹಾಲಿನಲ್ಲಿ ಅತಿ ಹೆಚ್ಚು ಪೌಷ್ಠಿಕಾಂಶವಿರುವುದರಿಂದ ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಬಾಲ್ಡಿ ಬಿಲ್ಡರ್ ಮಸಲ್ಸ್ ಬೆಳೆಸಲು ತಾಯಿಯ ಎದೆ ಹಾಲು ಉತ್ತಮವಂತೆ. ಈವರೆಗೆ ರಾಫೆಲಾ ಸುಮಾರು 500 ಲೀಟರ್ ಎದೆ ಹಾಲನ್ನು ಮಾರಾಟ ಮಾಡಿದ್ದಾಳೆ. ಅದರಿಂದ 4 ಲಕ್ಷ ರೂಪಾಯಿಗೂ ಅಧಿಕ ಹಣ ಗಳಿಸಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೇಲ್ಲಾ ಮಾಡಲು ಅವರಿಗೆ ಫೇಸ್ಬುಕ್ ಮೂಲಕನೇ ಸಾಧ್ಯವಾಯಿತು ಎಂದು ಅವರು ಖುಷಿಯಿಂದ ಹೇಳುತ್ತಾರೆ.