ಬೆಂಡೆಕಾಯಿ ಚಿಹ್ನೆಯೊಂದಿಗೆ ಕಾಪು ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಅನುಪಮಾ ಶೆಣೈ!
ನ್ಯೂಸ್ ಕನ್ನಡ ವರದಿ(10-04-2018): ಮಾಜಿ ಡಿವೈಎಸ್ಪಿ ಹಾಗೂ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಸಂಸ್ಥಾಪಕಿ ಅನುಪಮಾ ಶೆಣೈ ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿದೆ.
ಕನ್ನಡ ರಾಜ್ಯೋತ್ಸವ ದಿನದಂದು ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಭಾರತೀಯ ಜನಶಕ್ತಿ ಕಾಂಗ್ರೆಸ್ ಎಂಬ ಹೊಸ ಪಕ್ಷದ ಸಂಸ್ಥಾಪಕಿಯಾಗಿದ್ದಾರೆ. ಅನುಪಮಾ ಶೆಣೈ ನೂತನ ಪಕ್ಷಕ್ಕೆ ಚುನಾವಣಾ ಆಯೋಗವು ‘ಬೆಂಡೆಕಾಯಿ’ ಚಿಹ್ನೆಯನ್ನು ಅಧಿಕೃತವಾಗ ನೀಡಿದೆ.
ಕೂಡ್ಲಿಗಿಯಿಂದ ಪಿ.ಟಿ.ಪರಮೇಶ್ವರ ನಾಯಕ್ ವಿರುದ್ಧ ಅನುಪಮಾ ಶಣೈ ಸ್ಪರ್ಧಿಸುತ್ತಾರೆ ಎಂದು ಈ ಮೊದಲು ಹೇಳಲಾಗುತ್ತಿದ್ದು, ಈ ಕುರಿತು ಪ್ರತಿಕ್ರಯಿಸಿದ ಅವರು ‘ಉಡುಪಿಯ ಕಾಪು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದು, ನಾವು ಜಿದ್ದಿಗಾಗಿ ಪಾರ್ಟಿ ಮಾಡಿದ್ದಲ್ಲ. ಪಿ.ಟಿ.ಪರಮೇಶ್ವರ ನಾಯ್ಕ ಸ್ಪರ್ಧಿಸುವ ಕ್ಷೇತ್ರ ಎಸ್ ಟಿ ಮೀಸಲು ಕ್ಷೇತ್ರವಾಗಿದ್ದು, ಆ ಹಿನ್ನೆಲೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡಲು ಆಗುತ್ತಿಲ್ಲ. ನನ್ನ ಊರಿನಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.