ಅಂಬರೀಷ್ ರೆಬೆಲ್ ಗೆ ಹೆದರಿದ ಕಾಂಗ್ರೆಸ್: ಮಂಡ್ಯ ಟಿಕೆಟ್ ಸಹಿತ 2 ಕ್ಷೇತ್ರಗಳ ಹೊಣೆ?
ನ್ಯೂಸ್ ಕನ್ನಡ ವರದಿ(10-04-2018): ಮಾಜಿ ಸಚಿವ ಅಂಬರೀಷ್ ಅವರ ಮುನಿಸಿಗೆ ಹೆದರಿಕೊಂಡ ಕಾಂಗ್ರೆಸ್ ಹೈಕಮಾಂಡ್ ಮಂಡ್ಯದಲ್ಲಿ ಅಂಬರೀಷ್ ಅವರಿಗೆ ಟಿಕೆಟ್ ನೀಡುವುದರ ಜೊತೆಗೆ ಜಿಲ್ಲೆಯ 2 ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಹೊಣೆಯೂ ಅಂಬಿಯ ಹೆಗಲಿಗೆ ನೀಡಿದೆ ಎಂದು ಮೂಲಗಳು ತಿಳಿಸಿದೆ.
ತನ್ನ ಸ್ವಕ್ಷೇತ್ರ ಮಂಡ್ಯದಿಂದ ಮತ್ತೊಮ್ಮೆ ಟಿಕೆಟ್ ಗಿಟ್ಟಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ರೆಬೆಲ್ ಸ್ಟಾರ್. ಈಗಾಗಲೇ ಜಿಲ್ಲೆಯ 7 ಸ್ಥಾನಗಳ ಪೈಕಿ 5 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದ್ದು, ಬಾಕಿಯಿರುವ ಎರಡು ಕ್ಷೇತ್ರಗಳಾದ ಮದ್ದೂರು ಹಾಗೂ ಕೆ.ಆರ್.ಪೇಟೆಯ ಅಭ್ಯರ್ಥಿಗಳನ್ನು ಅಂಬಿಯವರ ಉಸ್ತುವಾರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಇದೇ ವೇಳೆ, ಇವತ್ತು ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಮುಕ್ತಾಯವಾಗಲಿದ್ದು, ಸಿದ್ದರಾಮಯ್ಯ, ಪರಮೇಶ್ವರ್ ಮೊದಲಾದವರು ರಾಜ್ಯಕ್ಕೆ ವಾಪಸಾಗಲಿದ್ದಾರೆ. ಮೂಲಗಳ ಪ್ರಕಾರ ಇನ್ನು 3-4 ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಅಧಿಕೃತವಾಗಿ ಪ್ರಕಟವಾಗುವ ನಿರೀಕ್ಷೆಯಿದೆ.