ಉತ್ತರ ಪ್ರದೇಶ: ಕೇಸರಿಮಯವಾಗಿದ್ದ ಅಂಬೇಡ್ಕರ್ ಪ್ರತಿಮೆಗೆ ನೀಲಿ ಬಣ್ಣ ಬಳಿದ ಬಿಎಸ್ಪಿ ನಾಯಕ!

ನ್ಯೂಸ್ ಕನ್ನಡ ವರದಿ(10-04-2018): ಉತ್ತರ ಪ್ರದೇಶದ ಬದೌನ್ ನಲ್ಲಿ ದುಷ್ಕರ್ಮಿಗಳಿಂದ ಹಾನಿಗೀಡಾಗಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಪುನರ್ಪ್ರತಿಷ್ಠಾಪಿಸಿದ ಸ್ಥಳೀಯ ಜಿಲ್ಲಾಡಳಿತವು ಪ್ರತಿಮೆಗೆ ಕೇಸರಿ ಬಣ್ಣವನ್ನು ಬಳಿದ ವಿಚಾರವು ವಿವಾದಕ್ಕೆಡೆಯಾಗಿತ್ತು. ಇದೀಗ ಕೇಸರಿಮಯವಾಗಿದ್ದ ಆ ಪ್ರತಿಮೆಗೆ ಬಿಎಸ್ಪಿ ನಾಯಕ ನೀಲಿ ಬಣ್ಣವನ್ನು ಬಳಿದಿದ್ದಾರೆ.

ಸ್ಥಳೀಯ ಬಿಎಸ್ಪಿ ನಾಯಕ ಹಿಮೇಂದ್ರ ಗೌತಮ್ ಅಂಬೇಡ್ಕರ್ ಪ್ರತಿಮೆಗೆ ನೀಲಿ ಬಣ್ಣ ಬಳಿದು ನಂತರ ಯೋಗಿ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಇಡೀ ರಾಜ್ಯವನ್ನೇ ಕೇಸರಿ ಮಾಡಿದ ಯೋಗಿ ಆದಿತ್ಯನಾಥ್ ಸರಕಾರವು ಇದೀಗ ಸಂವಿಧಾನ ಶಿಲ್ಲಿ ದಲಿತರ ನಾಯಕ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನೂ ಕೂಡ ಕೇಸರಿಮಯಗೊಳಿಸುವ ಮೂಲಕ ದಲಿತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದಿದ್ದಾರೆ.

ಇತ್ತಿಚೆಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರವು ಅಂಬೇಡ್ಕರ್ ಹೆಸರನ್ನು ಭೀಮ್ ರಾವ್ ರಾಮ್ ಜೀ ಅಂಬೇಡ್ಕರ್ ಎಂದು ಬದಲಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Leave a Reply

Your email address will not be published. Required fields are marked *