ಯುಎಇ ರಸ್ತೆಗಳಲ್ಲಿ ಶಾಲಾ ವಾಹನಗಳಿಗೆ ದಾರಿ ನೀಡುವುದಿಲ್ಲವೇ?: ಹಾಗಾದರೆ ನಿಮಗೆ ಕಾದಿದೆ ಭಾರಿ ದಂಡ!

ನ್ಯೂಸ್ ಕನ್ನಡ ವರದಿ(10-04-2018): ನೀವು ಯುಎಇಯಲ್ಲಿ ವಾಹನ ಚಲಾಯಿಸುತ್ತಿರುವ ಸಮಯದಲ್ಲಿ ನಿಮ್ಮ ಹಿಂದಿನಿಂದ ಬರುತ್ತಿರುವ ಶಾಲಾ ವಾಹನಗಳಿಗೆ ನೀವು ದಾರಿ ಬಿಟ್ಟು ಕೊಡದಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ ಎಂದು ದುಬೈ ಪೋಲಿಸರು ಎಚ್ಚರಿಸಿದ್ದಾರೆ.

ಪೋಲಿಸರ ಪ್ರಕಾರ ಶಾಲಾ ಮಕ್ಕಳ ವಾಹನಗಳಿಗೆ ದಾರಿ ಬಿಟ್ಟು ಕೊಡದ ವಾಹನ ಚಾಲಕರಿಗೆ 1000 ದಿರ್ಹಾಂ ದಂಡ ಜೊತೆಗೆ ವಾಹನ ಚಾಲಕನಿಗೆ ಹತ್ತು ಕಪ್ಪು ಪಾಯಿಂಟ್ ನೀಡಲಾಗುವುದು.

ಪದೇ ಪದೇ ಶಾಲಾ ವಾಹನಗಳಿಗೆ ದಾರಿಯನ್ನು ಬಿಡದ ಕುರಿತು ಪೋಲಿಸರಿಗೆ ಶಾಲಾ ವಾಹನ ಚಾಲಕರಿಂದ ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಪೋಲಿಸರು ಈ ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಜಾರಿಗೆ ತಂದಿದ್ದಾರೆ.

Leave a Reply

Your email address will not be published. Required fields are marked *