ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ SDPI ಸಂಭಾವನೀಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ?

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಎಸ್.ಡಿ.ಪಿ.ಐ. ಸಂಭವನಿಯ ಅಭ್ಯರ್ಥಿಯಾಗಿ ಅಬ್ದುಲ್ ಜಲೀಲ್.ಕೆ.ಅಥವಾ ಅಶ್ರಫ್.ಎ.ಕೆ.ರವರ ಹೆಸರನ್ನು ಈ ವಾರದಲ್ಲಿ ಅಂತಿಮಗೊಳಸಿ ಬಿಡುಗಡೆಯಾಗುವ ಸಂಭವವಿದೆ

ಕರ್ನಾಟಕದಲ್ಲಿ ಒಟ್ಟು 50 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಈಗಾಗಲೇ ರಾಜ್ಯ ಸಮಿತಿಯು ತೀರ್ಮಾನಿಸಿದ್ದು ಇದರಲ್ಲಿ 25 ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿದ್ದು 6 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದ್ದು ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಅಭ್ಯರ್ಥಿಯಾಗಿ ರಿಯಾಝ್ ಪರಂಗಿಪೇಟೆಯವರ ಹೆಸರನ್ನು ಅಂತಿಮಗೊಳಿಸಿ ಅಧಿಕೃತವಾಗಿ ಪ್ರಕಟಿಸಿದ್ದು

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ,ಪುತ್ತೂರು, ಬೆಳ್ತಂಗಡಿ, ಮುಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಅಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ದಕ್ಷಿಣ ಜಿಲ್ಲಾ ನಾಯಕರುಗಳು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು ದಕ್ಷಿಣ ‌ಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಅ‌‌ಭ್ಯರ್ಥಿ ಕಣಕ್ಕಿಳಿಸಲು ರಾಜ್ಯ ನಾಯಕರೊಂದಿಗೆ ಒತ್ತಡ ಹೇರುತ್ತಿದ್ದು ಅದರಲ್ಲೂ ಪ್ರತಿಷ್ಠಿತ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಸಂಭಾವನೀಯ ಅಭ್ಯರ್ಥಿಯಾ ಪಟ್ಟಿ ತಯಾರಾಗಿದ್ದು ಅಭ್ಯರ್ಥಿಯಾಗಿ ಅಬ್ದುಲ್ ಜಲೀಲ್. ಕೆ.ಅಥವಾ ಅಶ್ರಫ್. ಎ.ಕೆ.ರವರ ಹೆಸರನ್ನು ಅಂತಿಮಗೊಳಿಸಿ ಈ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ

Leave a Reply

Your email address will not be published. Required fields are marked *