ಹೋರಾಟ ಅನ್ನುತ್ತಾ 8ಕೋಟಿಯ ಮನೆ ಕಟ್ಟಿಸಿಕೊಂಡಿದ್ದಾರೆ ಎಂದ ಮುತಾಲಿಕ್ ಗೆ ಸಿ.ಟಿ. ರವಿ ತಿರುಗೇಟು!

ನ್ಯೂಸ್ ಕನ್ನಡ ವರದಿ-(10.04.18): ಶ್ರೀರಾಮ ಸೇನೆಯ ಸ್ಥಾಪಕ ಮತ್ತು ಹಿಂದೂಪರ ಹೋರಾಟಗಾರ ಪ್ರಮೋದ್ ಮುತಾಲಿಕ್ ರನ್ನು ಬಿಜೆಪಿ ಪಕ್ಷವು ಸೇರಿಸಿಕೊಂಡಿರಲಿಲ್ಲ. ಬಳಿಕ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ಮಾಡಲು ಪ್ರಾರಂಭಿಸಿದ ಮುತಾಲಿಕ್ ಇದೀಗ ಶಿವಸೇನೆಯ ಬೆಂಬಲದೊಂದೊಗೆ ಕರ್ನಾಟಕದಲ್ಲಿ ಚುನಾವಣೆ ಎದುರಿಸಲು ತಯಾರಾಗಿದ್ದಾರೆ. ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಪ್ರಮೋದ್ ಮುತಾಲಿಕ್, “ದತ್ತಪೀಠದ ಪರ ಹೋರಾಟ ಮಾಡುತ್ತೇನೆ ಎಂದೇ ಹೇಳಿಕೊಂಡು ಚಿಕ್ಕಮಗಳೂರಿನಲ್ಲಿ ಸಿಟಿ ರವಿ 8 ಕೋಟಿ ರೂ.ಯ ಮನೆ ಕಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ಇದೀಗ ಈ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಪ್ರಮೋದ್ ಮುತಾಳಿಕ್ ಅಸೆಸ್ ಮೆಂಟ್ ಆಫೀಸರ್ ಯಾವಾಗ ಆದರು ಎಂದು ನನಗೆ ಗೊತ್ತಿಲ್ಲ. ನಾನು ನನ್ನ ಮನೆ ಕಟ್ಟಿದ ಕುರಿತಾದಂತೆ ದಾಖಲೆಗಳನ್ನೆಲ್ಲಾ ಲೋಕಾಯುಕ್ತರಿಗೆ ಮತ್ತು ಆದಾಯ ತೆರಿಗೆ ಅಧಿಕಾರಿಗಳಿಗೆ ನೀಡಿದ್ದೇನೆ. ಮುತಾಲಿಕ್ ರ ಹಿಂದೂಪರ ಹೋರಾಟವು ಹಿಂದೂ ವಿರೋಧಿ ಕಾಂಗ್ರೆಸ್ ಗೆ ಲಾಭವಾಗಬೇಕೋ, ಹಿಂದೂ ಪರವಾಗಿರುವ ಬಿಜೆಪಿಗೆ ಲಾಭವಾಗಬೇಕೋ ಎಂದು ಅವರೇ ತೀರ್ಮಾನಿಸಲಿ. ದತ್ತಪೀಠದ ಬಗ್ಗೆ ಉಗ್ರವಾಗಿ ಮಾತನಾಡಲು ಮುತಾಲಿಕ್ ಗೆ ಮೊದಲು ಮೈಕ್ ಕಟ್ಟಿಕೊಟ್ಟವರೇ ನಾವು ಎಂದು ಸಿಟಿ ರವಿ ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *