ಕಾಮನ್ ವೆಲ್ತ್ ಗೇಮ್ಸ್: ಮಿಲ್ಖಾ ಸಿಂಗ್ ದಾಖಲೆಯನ್ನು ಸರಿಗಟ್ಟಿದ ಕೇರಳದ ಮುಹಮ್ಮದ್ ಅನಸ್!
ನ್ಯೂಸ್ ಕನ್ನಡ ವರದಿ-(10.04.18): 2016 ರ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಹಾಗೂ 400ಮೀ. ಓಟದ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದು ಭರ್ಜರಿ ಪ್ರದರ್ಶನ ತೋರಿದ್ದ ಕೇರಳದ ಮುಹಮ್ಮದ್ ಅನಸ್ ಇದೀಗ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿದ್ದಾರೆ. 400ಮೀ. ಓಟದ ಸ್ಪರ್ಧೆಯಲ್ಲಿ ಕಾಮನ್ ವೆಲ್ತ್ ಗೇಮ್ಸ್ ನ ಫೈನಲ್ ಸುತ್ತನ್ನು ಪ್ರವೇಶಿಸಿರುವ ಮುಹಮ್ಮದ್ ಅನಸ್ ಮಿಲ್ಖಾ ಸಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕೇರಳದ ಮುಹಮ್ಮದ್ ಅನಸ್ ಅಚ್ಚರಿಯ ಫಲಿತಾಂಶ ತೋರಿದ್ದಾರೆ. ಈ ಮೂಲಕ ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ದಾಖಲೆಯನ್ನು ಮುರಿದಿದ್ದಾರೆ. ಮಿಲ್ಖಾ ಸಿಂಗ್ 1958ರಲ್ಲಿ ಈ ಸಾಧನೆಯನ್ನು ಮಾಡಿದ್ದರು.
