ಚೆನ್ನೈ: ಐಪಿಎಲ್ ಪಂದ್ಯ ನಡೆಯುತ್ತಿರುವಾಗಲೇ ಮೈದಾನಕ್ಕೆ ಚಪ್ಪಲಿ ಎಸೆದ ಪ್ರತಿಭಟನಕಾರರು!

ನ್ಯೂಸ್ ಕನ್ನಡ ವರದಿ-(10.04.18): ಚೆನ್ನೈನಲ್ಲಿ ಒಂದೆಡೆ ಕಾವೇರಿ ನೀರಿನ ಪ್ರತಿಭಟನೆ ನಡೆಯುತ್ತಿದ್ದು, ಹೀಗಾಗಿ ಐಪಿಎಲ್ ಗೆ ಅವಕಾಶ ನೀಡಬಾರದು ಎಂಬುವುದರ ಕುರಿತು ಚರ್ಚೆಗಳು ನಡೆಯುತ್ತಿದೆ ಮತ್ತು ಪ್ರತಿಭಟನೆಯೂ ನಡೆದಿದೆ. ಈ ನಡುವೆ ಇದೀಗ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಐಪಿಎಲ್ ಪಂದ್ಯಾಟವು ನಡೆಯುತ್ತಿದೆ. ಪಂದ್ಯವು ನಡೆಯುತ್ತಿರುವಂತೆಯೇ ಕೆಲವು ಪ್ರತಿಭಟನಕಾರರು ಮೈದಾನಕ್ಕೆ ಚಪ್ಪಲಿಗಳನ್ನು ತೂರಿದ್ದು, ಸ್ವಲ್ಪ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ತಮಿಳುನಾಡಿನಾದ್ಯಂತ ಕಾವೇರಿ ನೀರಿನ ವಿಚಾರದ ಕುರಿತಾದಂತೆ ಪ್ರತಿಭಟನೆಗಳು ನಡೆಯುತ್ತಿವೆ. ಐಪಿಎಲ್ ನಡೆಸಲು ನಾವು ಬಿಡುವುದಿಲ್ಲ. ಒಂದು ವೇಳೆ ಐಪಿಎಲ್ ಆಡುವುದಾದರೂ ಕಪ್ಪು ಪಟ್ಟಿ ಧರಿಸಿ ಆಡಬೇಕೆಂದು ಮನವಿ ಮಾಡಿದ್ದರು. ಇದೀಗ ಇಬ್ಬರು ಆಗಂತುಕರು ಪಂದ್ಯ ನಡೆಯುತ್ತಿದ್ದ ವೇಳೆ ಚಪ್ಪಲಿಗಳನ್ನು ತೂರಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ. ಅಲ್ಲದೇ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಟೇಡಿಯಂನಲ್ಲಿ ಅರ್ಧಕ್ಕರ್ಧ ಮಂದಿ ಖಾಲಿಯಾಗಿದ್ದರು. ಮೈದಾನಕ್ಕೆ ಬಿಗಿ ಭಧ್ರತೆ ಒದಗಿಸಲಾಗಿದೆ.

Leave a Reply

Your email address will not be published. Required fields are marked *