ಕೇರಳ ಸಂಸ್ಥಾನ ಜಂ-ಇಯ್ಯತುಲ್ ಉಲಮಾ ಕಾರ್ಯದರ್ಶಿ ಪಾಣಕ್ಕಾಡ್ ಸಯ್ಯಿದ್ ಜಬ್ಬಾರ್ ಶಿಹಾಬ್ ತಂಙಳ್ ನಿಧನ

ನ್ಯೂಸ್ ಕನ್ನಡ ವರದಿ-(10.04.18): ಮಂಗಳೂರು: ಕೇರಳ ಸಂಸ್ಥಾನ ಜಂ-ಇಯ್ಯತುಲ್ ಉಲಮಾ ಕಾಯದರ್ಶಿ, ಪಾಣಕ್ಕಾಡ್ ತರವಾಡಿನ ಅಗ್ರಗಣ್ಯ ನೇತಾರ ಪಾಣಕ್ಕಾಡ್ ಸಯ್ಯಿದ್ ಅಬ್ದುಲ್ ಜಬ್ಬಾರ್ ಶಿಹಾಬ್ ತಂಙಳ್ (63) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಸಂಜೆ ನಿಧನರಾದರು.

ಮರ್‍ಹೂಂ ಸಯ್ಯಿದ್ ಕೆ.ಎಂ.ಎಸ್. ಅಬ್ದುಲ್ ಕಹ್ಹಾರ್ ಪೂಕೋಯ ತಂಙಳ್ ಅವರ ಸುಪುತ್ರರಾಗಿರುವ ಇವರು ವಂಡೂರು ಜಾಮಿಅ ವಹಬಿಯಾ ಅರಬಿಕ್ ಕಾಲೇಜು, ಮಂಜೇರಿ ದಾರುಸ್ಸುನ್ನ ಅರಬಿಕ್ ಕಾಲೇಜು, ನಾದಾಪುರ ಫಲಾಹಿಯಾ ಅರಬಿಕ್ ಕಾಲೇಜು ಸಹಿತ ಕೇರಳದ ಹಲವು ಪ್ರಸಿದ್ದ ಅರಬಿಕ್ ಕಾಲೇಜುಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೇರಳ ಸುನ್ನಿ ಯುವಜನ ಫೆಡರೇಶನ್ (ಎಸ್‍ವೈಎಫ್) ಇದರ ಚೆಯರ್‍ಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಮೃತರು ಪತ್ನಿ ಸಫಿಯಾ ಸಹಿತ ಅಪಾರ ಮಂದಿ ಶಿಷ್ಯಂದಿರುವ, ಬಂಧು-ಬಳಗ ಮತ್ತು ಅಭಿಮಾನಿ ವರ್ಗವನ್ನು ಅಗಲಿದ್ದಾರೆ. ತಂಙಳ್ ಅವರ ದಫನ ಕಾರ್ಯವು ಮಲಪ್ಪುರಂ-ತಲಪ್ಪಾರ ವಲಿಯ ಜಮಾಅತ್ ಮಸೀದಿಯಲ್ಲಿ ಬುಧವಾರ ನೆರವೇರಲಿದೆ ಎಂದು ತಂಙಳ್ ಅವರ ಆಪ್ತ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *