ಮುಸಲ್ಮಾನರು ಬಹಳ ಕೆಟ್ಟವರು; ಹಿಂದೂಗಳೇ ಅವರನ್ನು ನಿಮ್ಮ ಮನೆಗೆ ಕರೆಯಬೇಡಿ: ರಾಜಸ್ಥಾನ ಬಿಜೆಪಿ ಶಾಸಕ
ನ್ಯೂಸ್ ಕನ್ನಡ ವರದಿ(11-04-2018): ಹಿಂದುಗಳೇ ನೀವು ಮುಸಲ್ಮಾನರನ್ನು ನಿಮ್ಮ ಮನೆಗೆ ಅಹ್ವಾನಿಸ ಬೇಡಿ.ಅವರು ಬಹಳ ಕೆಟ್ಟವರು ಎಂದು ರಾಜಸ್ಥಾನದ ಅಲ್ವಾರ್ ಬಿಜೆಪಿ ಶಾಸಕ ಬನ್ವಾರಿ ಲಾಲ್ ಸಂಘಾಲ್ ಮತ್ತೊಮ್ಮೆ ಮುಸಲ್ಮಾನರ ವಿರುದ್ಧ ಧ್ವೇಶದ ಹೇಳಿಕೆ ನೀಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ಜೊತೆ ಮಾತನಾಡಿದ ಶಾಸಕ ಬನ್ವಾರಿ ಲಾಲ್ ಸಿಂಫಾಲ್ ‘ಮುಸಲ್ಮಾನರು ಅಫರಾದ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರು. ನಾನು ನನ್ನ ಮನೆಗೆ ಹಾಗೂ ಕಛೇರಿಗೆ ಮುಸಲ್ಮಾನರನ್ನು ಪ್ರವೇಶಿಸಲು ಅ್ನುಮತಿಸುವುದಿಲ್ಲ”ಎಂದಿದ್ದಾರೆ.
ಮುಸ್ಲಿಮರು ಬಿಜೆಪಿಗೆ ಮತ ಚಲಾಯಿಸುವುದಿಲ್ಲ. ಆದ್ದರಿಂದ ನಾನು ಅವರ ಬಳಿ ಮತ ಯಾಚಿಸಲು ಹೋಗುವುದಿಲ್ಲ. ನಾನು ಚುನಾವಣೆಯ ಬಳಿಕವೂ ಮುಸಲ್ಮಾನರ ಬಳಿಗೆ ಹೋಗುವುದಿಲ್ಲ ಎಂದ ಬನ್ವಾರಿ ಲಾಲ್ ಒಂದು ವೇಳೆ ಮುಸಲ್ಮಾನರ ಬಳಿ ನಾನು ಮತ ಕೇಳಲು ಹೋದರೆ ಅವರ ಅಪರಾಧ ಕೃತ್ಯಗಳಿಗೆ ನಾನು ಬೆಂಬಲಿಸಿದಂತೆ ಎಂದರು.