ಹೃದಯದ ಖಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕಿಯ ಆಸೆ ನೆರವೇರಿಸಿದ ನಟ ದರ್ಶನ್!
ನ್ಯೂಸ್ ಕನ್ನಡ ವರದಿ-(11.04.18): ಸಾಮಾಜಿಕವಾಗಿ ಸ್ಪಂದನೆ ಮಾಡುವಂತಹ ಸೆಲೆಬ್ರಿಟಿಗಳು ಕಾಣಸಿಗುವುದು ಬಹಳ ವಿರಳ. ಆದರೆ ಕೆಲವರು ಎಷ್ಟೇ ದೊಡ್ಡ ಸ್ಟಾರ್ ಗಳಾದ್ರೂ ಮಾನವೀಯತೆಯ ಕಾರ್ಯವೆಂದರೆ ಕೂಡಲೇ ಸ್ಪಂದಿಸುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಓರ್ವ ಅದ್ಭುತ ನಟ. ಅವರು ಮಾಡುತ್ತಿರುವ ಮಾನವೀಯ ಕಾರ್ಯಗಳ ಕುರಿತು ಈಗಾಗಲೇ ನಾವು ತಿಳಿದುಕೊಂಡಿದ್ದೇವೆ. ಇದೀಗ 11 ವರ್ಷ ಪ್ರಾಯದ ಪುಟ್ಟ ಬಾಲಕಿಯೊಬ್ಬಳು ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದು, ಆಕೆಯ ಆಸೆಯಂತೆಯೇ ದರ್ಶನ್ ಬಾಲಕಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಪೂರ್ವಿಕಾ ಎಂಬ 11 ವರ್ಷದ ಬಾಲಕಿ ಎರಡು ವರ್ಷಗಳಿಂದ ಹೃದಯ ಸಂಬಮಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇದೇ ಕಾರಣದಿಂದಾಗಿ ಆಕೆಯ ಹೊಟ್ಟೆಯಲ್ಲಿ ನೀರು ನಿಂತಿತ್ತು. ಹೀಗಾಗಿ ಈ ಬಾಲಕಿಯು ಇನ್ನು ಹೆಚ್ಚು ದಿನ ಬದುಕುವುದಿಲ್ಲವೆಂದು ಡಾಕ್ಟರ್ ಹೇಳಿದ್ದು, ಆಕೆಯ ಕೊನೆಯಾಸೆಯ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು ಭೇಟಿ ಮಾಡಿಸಲಾಯಿತು. ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದ ಅವರು ಪೂರ್ವಿಕಾಳೊಂದಿಗೆ ಮಾತನಾಡಿ ಧೈರ್ಯ ತುಂಬಿದ್ದಾರೆ.