ಕಳೆದ ಚುನಾವಣೆಯಲ್ಲಿ ಮುಖ ತೋರಿಸಿದ ನೀವು 5 ವರ್ಷ ಎಲ್ಲಿದ್ದೀರಿ?: ಸಿಟಿ ರವಿಗೆ ಗ್ರಾಮಸ್ಥರ ತರಾಟೆ!
ನ್ಯೂಸ್ ಕನ್ನಡ ವರದಿ-(11.04.18): ತನ್ನ ಕ್ಷೇತ್ರ ವ್ಯಾಪ್ತಿಯ ಗ್ರಾಮವೊಂದಕ್ಕೆ ಚುನಾವಣಾ ಪ್ರಚಾರಕ್ಕಾಗಿ ತೆರಲಿದ ಶಾಸಕ ಸಿ.ಟಿ.ರವಿಯವರನ್ನು ಗ್ರಾಮಸ್ಥರು ತರಾಟೆಗೆ ತೆಗೆದ ಘಟನೆಯು ವರದಿಯಾಗಿದೆ. ಶಾಸಕ ರವಿ ಚಿಕ್ಕಮಗಳೂರು ಕ್ಷೇತ್ರದ ಅಲ್ಲಂಪುರ ಗ್ರಾಮಕ್ಕೆ ತನ್ನ ಬೆಂಬಲಿಗರೊಂದಿಗೆ ತೆರಲಿದ್ದಾಗ ಈ ಘಟನೆ ನಡೆದಿದೆ.
ಕಳೆದ ಚುನಾವಣೆಯ ಸಮಯದಲ್ಲಿ ಮುಖ ತೋರಿಸಿದ ನೀವು ಐದು ವರ್ಷ ಎಲ್ಲಿದ್ದೀರಿ. ಇಲ್ಲಿ ಕುಡಿಯುವ ನೀರು ಸರಿಯಾಗಿ ಪೋರೈಕೆಯಾಗುತ್ತಿಲ್ಲ. ಅಲ್ಲಲ್ಲಿ ಪೈಪು ಒಡೆದು ನೀರು ಸೋರಿಕೆಯಾಗುತ್ತಿದೆ. ದುರಸ್ತಿ ಮಾಡಲು ಯಾರು ಬರುತ್ತಿಲ್ಲ. ಅಲ್ಲದೆ ಬಡವರಿಗೆ ಸಿಗಬೇಕಾದ ಆಶ್ಯ ಮನೆ ಶ್ರೀಮಂತರ ಪಾಲಾಗಿದೆ ಎಂದು ಗ್ರಾಮಸ್ಥರು ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಪ್ರಶ್ನೆಯಿಂದ ವಿಚಲಿತರಾದ ಶಾಸಕ ರವಿ ಜನರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಕೂಡ ಪ್ರಯೋದನವಾಗಿಲ್ಲ. ನಂತರ ರವಿಯವರು ತನ್ನ ಸಮೀಪವಿದ್ದ ಯುವಕನಿಗೆ ತಮಾಷೆಗೆ ಹೊಡೆದು ಅಲ್ಲಿಂದ ಜಾರಲು ಪ್ರಯತ್ನಿಸಿದರು. ಬೆನ್ನು ಬಿಡದ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದರು. ಸ್ವಲ್ಪ ಸಮಯದ ನಂತರ ಶಾಸಕ ರವಿಯವರು ಸ್ಥಳದಿಂದ ಕಾಲ್ಕಿತ್ತರು ಎಂದು ತಿಳಿದು ಬಂದಿದೆ.