ತನ್ನನ್ನು ಔಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದ ಯುವ ಆಟಗಾರನಿಗೆ ಕೊಹ್ಲಿ ನೀಡಿದ ಗಿಫ್ಟ್ ಏನು ಗೊತ್ತೇ?

ನ್ಯೂಸ್ ಕನ್ನಡ ವರದಿ-(11.04.18): ಯಾವುದೇ ಒಬ್ಬ ಕ್ರಿಕೆಟ್ ಆಟಗಾರನ ಹೆಸರು ಮತ್ತು ಪ್ರತಿಭೆ ಜಗಜ್ಜಾಹೀರಾಗಬೇಕಾದಲ್ಲಿ ಆತ ಇಂಡಿಯನ್ ಪ್ರೀಮಿಯರ್ ಲೀಗ್ ಆಡುವುದು ಅನಿವಾರ್ಯ ಎಂದಾಗಿಬಿಟ್ಟಿದೆ. ಹಾಗೆಯೇ ನಿತೀಶ್ ರಾಣಾ ಎಂಬ ಆಟಗಾರನೊಬ್ಬ ಉದಯಿಸಿದ್ದೂ ಐಪಿಎಲ್ ನಲ್ಲೇ. ಮೊನ್ನೆ ತಾನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಪಂದ್ಯಾಟದಲ್ಲಿ ನಿತೀಶ್ ರಾಣಾ ಉತ್ತಮ ಪ್ರದರ್ಶನ ತೋರಿದ್ದರು. ಆರ್ಸಿಬಿ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್‍ರನ್ನು ನಿತೀಶ್ ಔಟ್ ಮಾಡಿದ್ದರು. ವಿರಾಟ್ ಕೊಹ್ಲಿ ವಿಕೆಟ್ ಪಟಡೆದ ಬಳಿಕವಂತೂ ನಿತೀಶ್ ಅಶ್ಲೀಲ ಪದವನ್ನೂ ಪ್ರಯೋಗಿಸಿದರು.

ವಿರಾಟ್ ಕೊಹ್ಲಿಯಂಥ ಆಟಗಾರರ ವಿಕೆಟ್ ಪಡೆಯುವುದೆಂದರೆ ಪ್ರತಿಯೊಬ್ಬ ಯುವ ಆಟಗಾರನ ಕನಸು. ಅತಿರೇಕದ ಸಂಭ್ರಮಾಚರಣೆಯಿಂದ ಈ ರೀತಿಯ ಪದಪ್ರಯೋಗಿಸಿರಲೂಬಹುದು ಬಿಡಿ. ಆದರೆ ಈ ಕುರಿತಾದಂತೆ ವಿರಟ್ ಕೊಹ್ಲಿಯ ಪ್ರತಿಕ್ರಿಯೆ ಹೇಗಿರಬಹುದೆಂದು ಪ್ರತಿಯೊಬ್ಬರಿಗೂ ಕುತೂಹಲವಿತ್ತು. ಇದೀಗ ವಿರಾಟ್ ಕೊಹ್ಲಿ ನಿತೀಶ್ ರಾಣಾ ವಿರುದ್ಧವಾಗಿ ಏನೂ ಮಾತಾಡದೇ ತಮ್ಮ ಬ್ಯಾಟೊಂದನ್ನು ರಾಣಾಗೆ ನೀಡಿದ್ದಾರೆ. ಈ ಮೂಲಕ ಕ್ರೀಡಾಸ್ಫೂರ್ತಿಗೆ ಕೊಹ್ಲಿ ಉತ್ತಮ ಉದಾಹರಣೆಯಾಗಿದ್ದಾರೆ. ಈ ಕುರಿತಾದಂತೆ ನಿತೀಶ್ ರಾಣಾ ಸಾಮಾಜಿಕ ತಾಣದಲ್ಲಿ ಫೋಟೊ ಪ್ರಕಟಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *