ನ್ಯಾಯಕ್ಕಾಗಿ ಅರೆನಗ್ನ ಪ್ರತಿಭಟನೆ ನಡೆಸಿದ ನಟಿ ಶ್ರೀರೆಡ್ಡಿಗೆ ಸಿಕ್ಕಿದ ಶಿಕ್ಷೆಯೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ಕೆಲ ದಿನಗಳ ಹಿಂದೆ ತೆಲುಗು ಸಿನಿಮಾ ನಟಿ ಶ್ರೀರೆಡ್ಡಿ ತೆಲುಗು ಸಿನಿಮಾರಂಗದಲ್ಲಿ ‘ಕಾಸ್ಟಿಂಗ್ ಕೌಚ್’ ಇದೆ ಎಂದು ಆರೋಪಿಸಿ ಅದರ ವಿರುದ್ಧ ಧ್ವನಿ ಎತ್ತಲು ಮಾಧ್ಯಮದವರ ಗಮನ ಸೆಳೆಯಲು ತೆಲುಗು ಕಲಾವಿದರ ಸಂಘದ ಕಚೇರಿ ಮುಂದೆ ಸಾರ್ವಜನಿಕವಾಗಿ ಅರೆನಗ್ನರಾಗಿ ಪ್ರತಿಭಟನೆ ನಡೆಸಿದ್ದರು ಮತ್ತು ದೇಶದಾದ್ಯಂತ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು.

ತೆಲುಗು ಚಿತ್ರರಂಗದಲ್ಲಿ ಸಿನಿಮಾ ಪಾತ್ರ ಸಿಗಬೇಕಾದರೆ ನಾವು ಮಂಚಕ್ಕೆ ಬರಬೇಕು ಎಂದು ಆಹ್ವಾನ ನೀಡುತ್ತಾರೆ, ಇಂತಹ ಕೆಟ್ಟ ಪದ್ಧತಿ ನಿಲ್ಲಬೇಕು, ಕಲಾವಿದರಿಗೆ ಅವರ ಅರ್ಹತೆಯ ಮೇಲೆ ಪಾತ್ರ ಸಿಗಬೇಕು ಎಂದು ಒತ್ತಾಯಿಸಿ ಅವರು ನಡೆಸಿದ ಪ್ರತಿಭಟನೆಗೆ ಈಗ ಭಾರೀ ಬೆಲೆ ತೆರಬೇಕಾಗಿದೆ. ಅದೇನೆಂದರೆ ಆಕೆಯ ಪ್ರತಿಭಟನೆಯ ಸುದ್ದಿ ಮಾಧ್ಯಮದ ಮೂಲಕ ತಿಳಿದ ಆಕೆಯ ಮನೆಯ ಮಾಲೀಕ ಆಕೆಗೆ ಕೂಡಲೇ ಮನೆ ಖಾಲಿ ಮಾಡುವಂತೆ ಆದೇಶಿಸಿದ್ದಾನೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ವಿಷಯ ಹಂಚಿಕೊಂಡ ಶ್ರೀರೆಡ್ಡಿ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ, ‘ದೊಡ್ಡವರು’ ತಮ್ಮ ಶಕ್ತಿ ಪ್ರದರ್ಶನ ಮಾಡಲು ಶುರುಮಾಡಿದ್ದಾರೆ, ಇದರಿಂದ ನನ್ನ ಹೋರಾಟ ನಿಲ್ಲಲ್ಲ, ಅದು ನಿರಂತರವಾಗಿ ಮುಂದುವರೆಯುತ್ತೆ ಎಂದು ಹೇಳಿದರು.

Leave a Reply

Your email address will not be published. Required fields are marked *