ಪಂದ್ಯ ನಡೆಯುತ್ತಿರುವಾಗಲೇ ಕ್ರೀಡಾಂಗಣಕ್ಕೆ ಶೂ ಎಸೆದ ಪ್ರತಿಭಟನಕಾರರು: ವೀಡಿಯೋ ಮತ್ತು ಚಿತ್ರಗಳನ್ನು ವೀಕ್ಷಿಸಿ

ನ್ಯೂಸ್ ಕನ್ನಡ ವರದಿ-(11.04.18): ಚೆನ್ನೈನಲ್ಲಿ ಒಂದೆಡೆ ಕಾವೇರಿ ನೀರಿನ ಪ್ರತಿಭಟನೆ ನಡೆಯುತ್ತಿದ್ದು, ಹೀಗಾಗಿ ಐಪಿಎಲ್ ಗೆ ಅವಕಾಶ ನೀಡಬಾರದು ಎಂಬುವುದರ ಕುರಿತು ಚರ್ಚೆಗಳು ನಡೆಯುತ್ತಿದೆ ಮತ್ತು ಪ್ರತಿಭಟನೆಯೂ ನಡೆದಿದೆ. ಈ ನಡುವೆ ಇದೀಗ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಐಪಿಎಲ್  ಪಂದ್ಯವು ನಡೆಯುತ್ತಿರುವಂತೆಯೇ ಕೆಲವು ಪ್ರತಿಭಟನಕಾರರು ಮೈದಾನಕ್ಕೆ ಚಪ್ಪಲಿಗಳನ್ನು ತೂರಿದ್ದು, ಸ್ವಲ್ಪ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

 

 

Leave a Reply

Your email address will not be published. Required fields are marked *