ಕಲ್ಲಡ್ಕ ಪ್ರಭಾಕರ ಭಟ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ: ಯು.ಟಿ ಖಾದರ್
ನ್ಯೂಸ್ ಕನ್ನಡ ವರದಿ-(11.04.18): ಹೇಗೂ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯು ಬಹಳ ಹತ್ತಿರದಲ್ಲೇ ಇದೆ. ಈಗಾಗಲೇ ಆರೆಸ್ಸೆಸ್ ನ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅಖಾಡಕ್ಕಿಳಿಸದಿದ್ದಾರೆ. ಪ್ರಚೋದನಕಾರಿ ಹೇಳಿಕೆಗಳನ್ನೂ ನೀಡಲು ಪ್ರಾರಂಭಿಸಿದ್ದಾರೆ. ಇದೀಗ ಪ್ರಭಾಕರ ಭಟ್ ಮತ್ತು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ನಡುವೆ ವಾಕ್ಸಮರ ನಡೆಯುತ್ತಿದೆ.
ಮೊದಲು ಯುಟಿ ಖಾದರ್ ರವರು ಕರಾವಳಿಯ ದೈವ ಕೊರಗಜ್ಜ ದೈವಸ್ಥಾನಕ್ಕೆ ಹೋಗಿ ಪ್ರಸಾದ ಪಡೆದುದಕ್ಕೆ ಪ್ರಭಾಕರ ಭಟ್ ಆಕ್ರೋಶ ವ್ಯಕ್ತಪಡಿಸಿ, ದೈವಸ್ಥಾನಕ್ಕೆ ಇನ್ನೊಂದು ಬ್ರಹ್ಮಕಲಶೋತ್ಸವ ಮಾಡಬೇಕು ಎಂದು ಹೇಳಿದ್ದರು. ಆದರೆ ಯುಟಿ ಖಾದರ್ ಮತ್ತೊಮ್ಮೆ ದೈವಸ್ಥಾನಕ್ಕೆ ತೆರಳಿ ದೈವಗಳ ಆಶೀರ್ವಾದ ಪಡೆದಿದ್ದರು. ಈ ಕುರಿತು ಕಲ್ಲಡ್ಕ ಭಟ್, ” ಏಕದೈವ ವಿಶ್ವಾಸಿಯಾಗಿರುವ ಖಾದರ್ ಕೊರಗಜ್ಜ ದೈವಸ್ಥಾನಕ್ಕೆ ಯಾಕೆ ತೆರಳುತ್ತಾರೆ ಎಂದು ಕೇಳಿದ್ದರು. ಇದೀಗ ಈ ಕುರಿತು ಪ್ರತಿಕ್ರಿಯಿಸಿದ ಯು.ಟಿ ಖಾದರ್, ಕಲ್ಲಡ್ಕ ಭಟ್ಟರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರಿಗೆ ಇನ್ನೊಂದು ಧರ್ಮಕ್ಕೆ ಗೌರವ ನೀಡುವುದು ಹೇಗೆಂದು ತಿಳಿದೇ ಇಲ್ಲ ಎಂದು ಹೇಳಿದ್ದಾರೆ.