ಆನ್ಲೈನ್ ನಲ್ಲಿ ಗಂಡ ಮೀಟಿಂಗ್ ಮಾಡುತ್ತಿರುವಾಗಲೇ ಕಿಸ್ ಕೊಡಲು ಬಂದ ಪತ್ನಿ ! ಮುಂದೆ ಏನಾಯಿತು ಇಲ್ಲಿದೆ ವೀಡಿಯೊ ನೋಡಿ….
ಆನ್ಲೈನ್ ನಲ್ಲಿ ನಡೆಯುವ ಮೀಟಿಂಗ್, ಮಕ್ಕಳ ಕ್ಲಾಸೆಸ್ಸ್ ವೇಳೆ ಏನೆಲ್ಲ ನಡೆಯುತ್ತೆ ಎಂಬುದು ಇತ್ತೀಚಿಗೆ ಒಂದೊಂದೇ ಬೆಳಕಿಗೆ ಬರುತ್ತಿದೆ. ಇಂಥದೇ ಒಂದು ಘಟನೆ ವ್ಯಕ್ತಿಯೋರ್ವ ತನ್ನ ಮನೆಯಲ್ಲಿ ಕುಳಿತು ಝೂಮ್ ಮೀಟಿಂಗ್ನಲ್ಲಿ ನಿರತನಾಗಿದ್ದ ವೇಳೆ ನಡೆದಿದೆ.
ಆರ್ಪಿಜಿ ದೇಶದ ಬಹು ಖ್ಯಾತ ಉದ್ಯಮ ಸಂಸ್ಥೆ. ಈ ಸಂಸ್ಥೆಯನ್ನು ಸದ್ಯ ಮುನ್ನಡೆಸುತ್ತಿರುವವರು ಹರ್ಷ ಗೋಯೆಂಕಾ. ಆರ್ಪಿಜಿ ಎಂದೇ ಖ್ಯಾತವಾದ ರಾಮ ಪ್ರಸಾದ್ ಗೋಯಂಕಾ ಎಂಟರ್ಪ್ರೈಸಸ್ನ ಮುಖ್ಯಸ್ಥ ಹರ್ಷ ಗೋಯೆಂಕಾ ಒಂದು ಟ್ವೀಟ್ ಮಾಡಿದ್ದಾರೆ. ಅದರಲ್ಲೇನು ವಿಶೇಷ ಎಂದಿರಾ? ಅವರ ಟ್ವೀಟ್ ವರ್ಚುವಲ್ ಸಭೆಗಳಲ್ಲಿ ನಡೆಯುವ ವಿಚಿತ್ರ ಘಟನೆಗಳಿಗೆ ಸಂಬಂಧಿಸಿದ್ದೇ ಆಗಿದೆ. ಏನದು? ಈ ಸ್ಟೋರಿ ಓದಿ.
ವ್ಯಕ್ತಿಯೋರ್ವ ತನ್ನ ಮನೆಯಲ್ಲಿ ಕುಳಿತು ಝೂಮ್ ಮೀಟಿಂಗ್ನಲ್ಲಿ ನಿರತನಾಗಿದ್ದ. ಮನೆಯಲ್ಲಿ ಕುಳಿತಾಗ ಮನೆಯವರ ಮಾತು ಕೇಳದಂತೆ, ಮನೆಯವರು ಫ್ರೇಮ್ನಲ್ಲಿ ಬರದಂತೆ ನೋಡಿಕೊಳ್ಳಬೇಕು ತಾನೇ? ಆದರೆ ಈ ಪುಣ್ಯಾತ್ಮ ಅದನ್ನು ಮರೆತಿದ್ದ. ಝೂಮ್ ಮೀಟಿಂಗ್ನಲ್ಲಿ ಇದ್ದಾಗಲೇ ಈತನ ಮುದ್ದಿನ ಹೆಂಡತಿ ಫ್ರೇಮ್ನಲ್ಲಿ ಕಾಣಿಸಿಕೊಂಡಳು. ಕೇವಲ ಕಾಣಿಸಿಕೊಂಡಿದ್ದರೆ ಪರವಾಗಿರಲಿಲ್ಲ. ತನ್ನ ಪತಿರಾಯನ ಮೇಲೆ ಪ್ರೀತಿ ಉಕ್ಕಿ ಬಂದು ತನ್ನ ಕೆಂದುಟಿಗಳಿಂದ (?) ಆತನಿಗೆ ಚುಂಬನದ ಮಳೆ ಸುರಿಸಲು ಮುಂದಾಗಿದ್ದಳು! ಪಾಪ..ತನ್ನ ಪಾಡಿಗೆ ತಾನು ಮೀಟಿಂಗ್ ನಲ್ಲಿದ್ದ ಪತಿ ಒಂದು ಕ್ಷಣಕ್ಕೆ ಗಾಬರಿಬಿದ್ದುಹೋದ. ಆಗಿಂದಾಗಲೇ ಹೆಂಡತಿಯ ಮುಖಾರವಿಂದವನ್ನು ಕಂಪ್ಯೂಟರ್ ಫ್ರೇಮ್ನಿಂದ ಆಚೆಗೆ ಸರಿಸಿ ತಾನು ಮೀಟಿಂಗ್ನಲ್ಲಿರುವುದಾಗಿ ಭಿನ್ನವಿಸಿದ. ಆದರೆ ಅಲ್ಲಿಯವರೆಗಿನ ಈ ಪ್ರಹಸನ ಝೂಮ್ನಲ್ಲಿ ದಾಖಲಾಗಿತ್ತು. ಈ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ ಹರ್ಷ ಗೋಯೆಂಕಾ.
ಹರ್ಷ ಗೋಯೆಂಕಾ ಹಂಚಿಕೊಂಡ ಈ ವಿಡಿಯೋ ತುಣುಕನ್ನು ಮರು ಶೇರ್ ಮಾಡಿದ್ದಾರೆ ಮಹೇಂದ್ರಾ ಆ್ಯಂಡ್ ಮಹೇಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೇಂದ್ರಾ. ಪ್ರೇಮವುಕ್ಕಿ ಝೂಮ್ ಮೀಟಿಂಗ್ ಮಧ್ಯೆಯೇ ಮುದ್ದಿನ ಮಾಲೆ ಹಾಕಲು ಅತ್ಯುತ್ಸಾಹದಿಂದ ಧಾವಿಸಿದ ಈತನ ಪತ್ನಿಗೆ ‘ವರ್ಷದ ಪತ್ನಿ’ ಎಂಬ ಬಿರುದು ನೀಡಬಹುದು ಎಂದು ಅವರು ಕುಚೋದ್ಯ ಮಾಡಿದ್ದಾರೆ. ಪತಿಯೂ ಅವಳಿಗೆ ಸಹಕರಿಸಿದ್ದರೆ ಇಬ್ಬರಿಗೂ ‘ವರ್ಷದ ದಂಪತಿ’ ಪ್ರಶ್ಸ್ತಿ ನೀಡಬಹುದಿತ್ತು ಎಂದು ತಮಾಶೆಯಿಂದ ಕಾಲೆಳೆದಿದ್ದಾರೆ ಆನಂದ್ ಮಹೇಂದ್ರಾ.
ಈಘಟನೆ ಕುರಿತು ಪ್ರೇಮಿಗಳ ಸಂಘದ ರಾಷ್ಟ್ರಾಧ್ಯಕ್ಷರು ‘ಪ್ರೀತಿಯಲ್ಲಿ ಪರವಶವಾದ ದಂಪತಿಗೆ ಕಾಲವುಂಟೆ ಘಳಿಗೆಯುಂಟೇ? ಜಗದ ವಿದ್ಯಮಾನಗಳನ್ನು ಮರೆತು ಎಂದಿಗೂ ಪ್ರೇಮ; ಎಂದೆಂದಿಗೂ ಪ್ರೇಮ ಎಂದು ಹಾಡುತ್ತ ಪರಸ್ಪರ ಮಧುರವಾದ ಚುಂಬನವಿತ್ಯಾದಿ ಕ್ರಿಯೆಗಳಲ್ಲಿ ನಿರತರಾಗುವುದೇ ತಮ್ಮ ಪಾಲಿನ ಪ್ರಪಂಚ’ ಎಂದು ಗಾಸಿಪ್ ಬ್ಯೂರೋಗೆ ಪ್ರತಿಕ್ರಿಯಿಸಿದ್ದಾರೆ!