ಆಪಲ್ ಹಣ್ಣು ಪ್ರಿಯರಿಗೆ ಶಾಕಿಂಗ್ ಸುದ್ದಿ! ನೀವು ಇದನ್ನು ಮಿಸ್ ಮಾಡದೇ ಓದಲೇಬೇಕು..

ಮಾರ್ಕೆಟ್​ನಲ್ಲಿ ಹಣ್ಣು ಕೊಳ್ಳಲು ಹೋಗುವಾಗ ಮೊದಲು ಗಮನ ಸೆಳೆಯುವುದೇ ಕೆಂಪು ಬಣ್ಣದ ಆಪಲ್. ಅದರಲ್ಲೂ ಅಮೆರಿಕನ್ ಆಪಲ್ ಅಂದರೆ ಎಲ್ಲ್ರಿಲರಿಗೂ ಅದೇನೋ ಮೋಹ. ಆದರೆ, ಮಾರ್ಕೆಟ್​​​ನಲ್ಲಿರುವ ಅಮೆರಿಕನ್ ಆಪಲ್ ಬರೋಬ್ಬರಿ 4 ವರ್ಷಗಳ ಮುಂಚೆ ಬೆಳೆದಿದ್ದು ಎನ್ನುವ ಶಾಕಿಂಗ್ ನ್ಯೂಸ್ ಸಿಕ್ಕಿದೆ.

ಬೆಂಗಳೂರಿನ ಮಾರ್ಕೆಟ್ಗ​ಳಲ್ಲಿ, ಹಣ್ಣಿನ ಅಂಗಡಿಗಳಲ್ಲಿ ಸಿಗುವ ಅಮೆರಿಕನ್ ಆಪಲ್ ನಿಜವಾವಾಗಲೂ ಅಮೆರಿಕಾದ್ದೇ. ಆದರೆ ಸೇಬಿನಲ್ಲಿ ಇರಬೇಕಾದ ಯಾವ ಪೋಷಕಾಂಶಗಳೂ ಇರುವುದಿಲ್ಲ, ಬದಲಿಗೆ ಮೈಯೆಲ್ಲಾ ವಿಷವಾಗಿ ಬದಲಾಗಿರುತ್ತದೆ.

ಅಮೆರಿಕಾ ಪ್ರತಿವರ್ಷ ಲಕ್ಷ, ಲಕ್ಷ ಟನ್​ಗಳಷ್ಟು ಸೇಬು ಹಣ್ಣನ್ನು ಬೆಳೆಯುತ್ತದೆ. ಆದರೆ ಅವೆಲ್ಲವನ್ನೂ ಆಗಲೇ ಮಾರಾಟ ಮಾಡುವುದಿಲ್ಲ. ಬದಲಿಗೆ ಅವುಗಳನ್ನೆಲ್ಲಾ ವ್ಯಾಕ್ಸ್ ಮತ್ತು ರಾಸಾಯನಿಕಗಳ ಮಿಶ್ರಣಗಲ್ಲಿ ಮುಳುಗೇಳಿಸಿ ಫ್ರೀಜ್ ಮಾಡಿಟ್ಟಿರುತ್ತದೆ. ಎಷ್ಟರ ಮಟ್ಟಿಗೆ ಕೆಮಿಕಲ್ಸ್ ಈ ಸೇಬಿನಲ್ಲಿ ಇರುತ್ತೆ ಅಂದರೆ ಹಣ್ಣು ತನ್ನ ಬಣ್ಣವನ್ನೂ ಕಳೆದುಕೊಳ್ಳುವುದಿಲ್ಲ. ನಂತರ ಯಾವಾಗ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಹೆಚ್ಚುತ್ತದೆಯೋ ಆಗ ಈ ಕೆಮಿಕಲ್ ಕೋಟೆಡ್ ಹಣ್ಣುಗಳನ್ನು ರಫ್ತು ಮಾಡುತ್ತದೆ. ಆದರೆ ಅಷ್ಟರಲ್ಲಿ ಈ ಹಣ್ಣುಗಳು ತಮ್ಮೆಲ್ಲಾ ಪೋಷಕಾಂಶಗಳನ್ನು ಕಳೆದುಕೊಂಡು ಕೇವಲ ರಾಸಾಯನಿಕಗಳನ್ನಷ್ಟೇ ಹೊಂದಿರುತ್ತವೆ.

ಆಹಾರ ವಸ್ತುಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ರಫ್ತು ಅಥವಾ ಆಮದಾಗುವಾಗ ಅವುಗಳ ತಪಾಸಣೆ ಆಗುತ್ತದೆ. ಆದ್ರೆ ನಮ್ಮ ದೇಶದ ನಿಯಮಾವಳಿಗಳು ಅಮೆರಿಕನ್ ಆಪಲ್‌ನಲ್ಲಿ ಇರುವ ಡೈಫಿನೈಲ್ ಅಮೈನ್ ಮತ್ತು ಮಾರ್ಫೊಲಿನ್‌ಗಳನ್ನು ಹಾನಿಕಾರಕ ರಾಸಾಯನಿಕ ಅಂತ ಪರಿಗಣಿಸುವುದೇ ಇಲ್ಲ. ಆದರೆ ಈ ರಾಸಾಯನಿಕಗಳು ಅದೆಷ್ಟು ಡೇಂಜರಸ್ ಅಂದ್ರೆ ತಿಂದ ವ್ಯಕ್ತಿಯ ಲಿವರ್ ಮತ್ತು ಕಿಡ್ನಿ ಶಾಶ್ವತವಾಗಿ ಡ್ಯಾಮೇಜ್ ಜೊತೆಗೆ ಕ್ಯಾನ್ಸರ್ ಬರಬಹುದು ಅಂತಾರೆ ವೈದ್ಯರು.

ಇದೆಲ್ಲಾ ವಿಚಾರ ತಿಳಿದಿರುವುದರಿಂದ 2012ರಲ್ಲೇ ಯೂರೋಪಿಯನ್ ಯೂನಿಯನ್ ಅಮೆರಿಕನ್ ಸೇಬುಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆದ್ರೆ ನಮ್ಮ ದೇಶದೊಳಗೆ ಮಾತ್ರ ಅಮೇರಿಕಾದ ಈ ಕೆಂಪು ವಿಷ ರಾಜಾರೋಷವಾಗಿ ಬರ್ತಿರೋದು ಮಾತ್ರವಲ್ಲ, ದುಬಾರಿ ಬೆಲೆಗೆ ಬಿಕರಿ ಕೂಡಾ ಆಗ್ತಿದೆ. ಜನ ಕೂಡಾ ಆರೋಗ್ಯಕ್ಕೆ ಆಪಲ್ ಒಳ್ಳೇದು ಅಂತ ಖುಷಿಯಿಂದಲೇ ಇದೇ ವಿಷವನ್ನು ಮತ್ತಷ್ಟು ಕೊಂಡು ತಿನ್ನುತ್ತಿದ್ದಾರೆ.

Leave a Reply

Your email address will not be published. Required fields are marked *