ಭಾರತ-ಪಾಕ್ ರಾಜಕೀಯ ಬಿಕ್ಕಟ್ಟು; ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾಟ ಯುಎಇ ಗೆ ಶಿಫ್ಟ್
ನ್ಯೂಸ್ ಕನ್ನಡ ವರದಿ (11-04-2018): ಸೆಪ್ಟೆಂಬರ್ 13 ರಿಂದ 28ರ ವರೆಗೆ ಭಾರತದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯು ಭಾರತ-ಪಾಕ್ ರಾಜಕೀಯ ಬಿಕ್ಕಟ್ಟಿನ ಹಿನ್ನಲೆಯಲ್ಲಿ ತಟಸ್ಥ ಸ್ಥಳವಾದ ಯಎಇ(ಯುನೈಟೆಡ್ ಅರಬ್ ಎಮಿರೇಟ್ಸ್) ಗೆ ಸ್ಥಳಾಂತರಗೊಂಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಏಷ್ಯಾ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಅಧ್ಯಕ್ಷ ನಜಾಮ್ ಸೇಥಿ ಉದ್ದೇಶ ಪೂರ್ವಕವಾಗಿಯೇ ಟೂರ್ನಿಯನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಯಿತು ಎಂದರು.
ಸೆಪ್ಟಂಬರ್ 13ರಂದು ಪ್ರಾರಂಭವಾಗುವ 14ನೇ ಆವೃತಿಯ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾ ದೇಶ ಹಾಗೂ ಅಪಘಾನಿಸ್ತಾನ ತಂಡಗಳು ಪಾಲ್ಗೊಳ್ಳಲಿದ್ದು ಟೂರ್ನಿಯಲ್ಲಿ ಒಟ್ಟು 12 ಏಕದಿನ ಪಂದ್ಯಗಳು ನಡೆಯಲಿವೆ.