ಅಲ್ಜೀರಿಯನ್ ಸೇನಾ ವಿಮಾನ ಪತನ: 100ಕ್ಕೂ ಹೆಚ್ಚು ಮಂದಿ ಮೃತ್ಯು ಶಂಕೆ!
ನ್ಯೂಸ್ ಕನ್ನಡ ವರದಿ-(11.04.18): ನೂರಕ್ಕೂ ಹೆಚ್ಚು ಸೈನಿಕರನ್ನೊಳಗೊಂಡಿದ್ದ ಅಲ್ಜೀರಿಯಾದ ಸೇನಾ ವಿಮಾನ ಬುಧವಾರ ಪತನಗೊಂಡಿದ್ದು, ಅನೇಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಮಾನದಲ್ಲಿ 100ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿಗಳಿದ್ದರು. ಬೌಫಾರಿಕ್ ವಿಮಾನ ನಿಲ್ದಾಣದ ಹೊರಗೆ ದುರಂತಕ್ಕೀಡಾಯಿತು ಎಂದು ಸ್ಥಳೀಯ ಟಿವಿ ಎನ್ನಾಹರ್ ಟಿವಿ ವರದಿ ಮಾಡಿದೆ.
ಈ ಕುರಿತು ಅಲ್ಲಿನ ಅಧಿಕಾರಿಗಳು ಇನ್ನೂ ಹೇಳಿಕೆ ನೀಡಿಲ್ಲ. ವಿಮಾನ ಪತನಗೊಂಡ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿರುವ ದೃಶ್ಯವನ್ನು ಸ್ಥಳೀಯ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರೆಯಬೇಕಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
Algerian military aircraft with more than 100 on board crashes, several dead, reports Reuters
— ANI (@ANI) April 11, 2018