ಚೆನ್ನೈ ಸೂಪರ್ ಕಿಂಗ್ಸ್ ನ ಎರಡು ಪಂದ್ಯಗಳಲ್ಲಿ ಸಾಮ್ಯತೆ: ಸಾಮಾಜಿಕ ತಾಣದಾದ್ಯಂತ ಚರ್ಚೆ!
ನ್ಯೂಸ್ ಕನ್ನಡ ವರದಿ-(11.04.18): ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಮ್ಯಾಚ್ ಫಿಕ್ಸಿಂಗ್ ಆರೋಪದಡಿಯಲ್ಲಿ ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿತ್ತು. ಇದೀಗ ಮತ್ತೆ ಐಪಿಎಲ್ ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮರಳಿ ಬಂದಿದ್ದು, ಭರ್ಜರಿ ಪ್ರದರ್ಶನವನ್ನು ತೋರುತ್ತಿದೆ. ಸದ್ಯ ನಡೆದ ಎರಡು ಪಂದ್ಯಗಳಲ್ಲೂ ಚೆನ್ನೈ ತಂಡವು ಭರ್ಜರಿ ಜಯಗಳಿಸಿ ಅಜೇಯನಾಗಿ ಸಾಗುತ್ತಿದೆ. ಇದೀಗ ಐಪಿಎಲ್ ನ ಮೊದಲ ದಿನ ನಡೆದ ಪಂದ್ಯ ಹಾಗೂ ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯಗಳಲ್ಲಿ ಹಲವು ಸಾಮ್ಯತೆಗಳು ಕಂಡು ಬಂದಿದೆ. ಈ ಸಾಮ್ಯತೆಗಳ ಕುರಿತಾದಂತೆ ಸಾಮಾಜಿಕ ತಾಣಗಳಲಿ ಚರ್ಚೆಗಲು ನಡೆಯುತ್ತಿವೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧದ ಪ್ರಥಮ ಪಂದ್ಯದ ಕೊನೆಯ 24 ಎಸೆತಗಳಲ್ಲಿ 51 ರನ್ ಗಳಿಸಿಬೇಕಿತ್ತು. ಕಾಕತಾಳೀಯ ಎಂಬಂತೆ ಚೆನ್ನೈ ನಲ್ಲಿ ನಡೆದ ಕೋಲ್ಕತ್ತಾ ವಿರುದ್ಧದ ಎರಡನೇ ಪಂದ್ಯದಲ್ಲೂ 24 ಎಸೆತಗಳಲ್ಲಿ ಗೆ 51 ರನ್ ಹೊಡೆಯಬೇಕಿತ್ತು. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ ಆಟಗಾರ ಬ್ರಾವೋ ಸ್ಫೋಟಕ ಬ್ಯಾಟಿಂಗ್ ನಡೆಸಿ 68 ರನ್(30 ಎಸೆತ, 3 ಬೌಂಡರಿ, 7 ಸಿಕ್ಸರ್) ಚಚ್ಚಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು. ಎರಡನೇ ಪಂದ್ಯದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ 56 ರನ್(23 ಎಸೆತ, 2 ಬೌಂಡರಿ, 5 ಸಿಕ್ಸರ್)ಸಿಡಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ. ಸದ್ಯ ಎರಡು ಪಂದ್ಯಗಳಲ್ಲಿ ನಡೆದಿರುವ ಕಾಕತಾಳೀಯ ಅಂಶದ ಕುರಿತು ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
CSK's first 2 matches:
vs MI – 51 needed off 24 balls – Won with one ball remaining
vs KKR – 51 needed off 24 balls – Won with one ball remaining
Bravo in the first game and Billings in the second!
— Bharath Seervi (@SeerviBharath) April 10, 2018