ತೋಗಾಡಿಯಾ ಕುರಿತು ವಿಎಚ್ ಪಿ ಒಳಗೆ ಭಿನ್ನಮತ: ಅಧ್ಯಕ್ಷತೆಯಿಂದ ಪದಚ್ಯತಿ ಸಂಭವ?

ನ್ಯೂಸ್ ಕನ್ನಡ ವರದಿ(11-04-2018): ಕೇಂದ್ರ ಸರಕಾರದ ಮೇಲೆ ಆರೋಪಗಳನ್ನು ಮಾಡಿ ಸರಕಾರವನ್ನು ಮುಜುಗರಕ್ಕೀಡು ಮಾಡಿದ್ದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ವಿಚಾರವಾಗಿ ವಿಎಚ್ ಪಿಯಲ್ಲಿ ಆಂತರಿಕ ಭಿನ್ನಮತ ತಲೆದೋರಿದ್ದು, ಕೆಲವು ನಾಯಕರು ತೊಗಾಡಿಯಾ ಪರವಾಗಿದ್ದರೆ, ಇನ್ನೂ ಕೆಲವು ನಾಯಕರು ತೊಗಾಡಿಯಾ ಅವರನ್ನು ಅಧ್ಯಕ್ಷತೆಯಿಂದ ವಜಾಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದರ ಮೂಲಕ ವಿಎಚ್ ಪಿ ತೊಗಾಡಿಯಾ ವಿಚಾರವಾಗಿ ವಿಭಜನೆಯತ್ತ ಸಾಗುತ್ತಿರುವ ಮುನ್ಸೂಚನೆಗಳು ಗೋಚರಿಸುತ್ತಿದೆ.

ತನ್ನನ್ನು ಎನ್ ಕೌಂಟರ್ ಮೂಲಕ ಕೇಂದ್ರದ ಮೋದಿ ಸರಕಾರವು ಸಂಚು ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಕೇಂದ್ರ ಸರಕಾರವನ್ನು ಮುಜುಗರಕ್ಕೀಡು ಮಾಡಿ ತೊಗಾಡಿಯಾ ಹಿಂದೂ ಸಂಘಟನೆಗಳ ನಾಯಕರ ಕೆಂಗಣ್ಣಿಗೆ ಗರಿಯಾಗಿದ್ದರು. ತೊಗಾಡಿಯಾರವರು ಮಾಡಿರುವ ಈ ಆರೋಪವು ಅವರ ವಿಎಚ್ ಪಿ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬರುವಂತೆ ಮಾಡಿದೆ.

ಶುಕ್ರವಾರ ಅಲಹಾಬಾದ್ ನಲ್ಲಿ ವಿಎಚ್ ಪಿ ಧರ್ಮ ಸಂಸದ್ ನೇತೃತ್ವದ ಮಘ್ ಮೇಳ ನಡೆಯಲಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಈ ಮೇಳದಲ್ಲಿ ಭಾಗವಹಿಸಲಿದ್ದಾರೆ. ಈ ಮಹಾಮೇಳದಲ್ಲಿ ತೊಗಾಡಿಯಾ ವಿಚಾರ ಪ್ರಸ್ತಾಪವಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ. ಕಲವು ವಿಎಚ್ ಪಿ ನಾಯಕರು ತೊಗಾಡಿಯಾ ವಿಷಯವನ್ನು ಈ ಧರ್ಮ ಸಂಸದ್ ಮೇಳದಲ್ಲಿ ಪ್ರಸ್ತಾಪಿಸಬೇಕೆಂದು ಒತ್ತಾಯಿಸಿದರೆ, ಇನ್ನು ಕೆಲವು ನಾಯಕರು ಆ ವಿಷಯವನ್ನು ಇಲ್ಲಿ ಚರ್ಚಿಸುವುದು ಬೇಡ ಎಂದಿದ್ದಾರೆ.

ವಿಎಚ್ ಪಿ ಮಾರ್ರದರ್ಶಕ ಮಂಡಲದ ಹಿರಿಯ ಸದಸ್ಯ ಸ್ವಾಮಿ ಚಿನ್ಮಯಾನಂದ್ ಹಾಗೂ ವಿಎಚ್ ಪಿ ಕೇಂದ್ರ ಮುಖ್ಯಸ್ ಅಶೋಕ ತಿವಾರಿ ತೊಗಾಡಿಯಾ ವಿಷಯವನ್ನು ಧರ್ಮ ಸಂಸತ್ತಿನಲ್ಲಿ ಚರ್ಚಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ವಿಎಚ್ ಪಿ ರಾಜ್ಯ ಸಮಿತಿಯ ನಾಯಕರು ನಾವು ತೊಗಾಡಿಯಾ ವಿಷಯವನ್ನು ಶುಕ್ರವಾರದ ಮೇಳದಲ್ಲಿ ಚರ್ಚಿಸಿಯೇ ಸಿಧ್ದ ಎಂದು ಪಟ್ಟು ಹಿಡಿದಿದ್ದಾರೆ. ವಿಎಚ್ ಪಿ ಕೇಂದ್ರ ಸಮಿತಿಯು ತೊಗಾಡಿಯಾರನ್ನು ವಿರೋಧಿಸಿದರೆ, ರಾಜ್ಯ ಸಮಿತಿಯು ತೊಗಾಡಿಯಾರನ್ನು ಸಮರ್ಥಿಸುತ್ತಿದೆ. ಒಟ್ಟಿನಲ್ಲಿ ತೊಗಾಡಿಯಾ ವಿಚಾರವಾಗಿ ವಿಎಚ್ ಪಿ ವಿಭಿನ್ನ ನಿಲುವನ್ನು ಹೊಂದುವ ಮೂಲಕ ವಿಭಜನೆಯತ್ತ ಸಾಗುತ್ತಿದೆ.

Leave a Reply

Your email address will not be published. Required fields are marked *