ಹಾಲಾಡಿಗೆ ಕುಂದಾಪುರ ಬಿಜೆಪಿ ಟಿಕೆಟ್: ಪಕ್ಷಕ್ಕೆ ರಾಜೀನಾಮೆ ನೀಡಿದ ಹಲವು ಬಿಜೆಪಿ ಕಾರ್ಯಕರ್ತರು

ನ್ಯೂಸ್ ಕನ್ನಡ ವರದಿ(11-04-2018): ಕುಂದಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಹಾಲಾಡಿ ಶ್ರೀನಿವಾಸ್ ಶೆಟ್ಟಿಗೆ ಘೋಷಣೆಯಾದ ಬೆನ್ನಲ್ಲೇ ಬೂದಿ ಮುಚ್ಚಿದ ಕೆಂಡಂದಂತಿದ್ದ ಕುಂದಾಪುರ ಬಿಜೆಪಿ ಅಸಮಾಧಾನ ಸ್ಪೋಟಗೊಂಡಿದೆ. ಪಕ್ಷದ ಕ್ರಮವನ್ನು ಖಂಡಿಸಿ ಅನೇಕ ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ವಲಸಿಗರಿಗೆ ಬಿಜೆಪಿ ಟಿಕೆಟ್ ನೀಡುತ್ತಿದೆ ಎಂಬ ಮೂಲ ಬಿಜೆಪಿಗರ ಪರದೆ ಹಿಂದಿನ ಭಿನ್ನಮತ ಇದೀಗ ಸ್ಪೋಟಗೊಂಡು ರಾಜಿನಾಮೆ ನೀಡುವ ವರೆಗೂ ತಲುಪಿದ್ದು ಕುಂದಾಪುರದಲ್ಲಿ ಬಿಜೆಪಿಗೆ ಈ ಭಿನ್ನಮತ ಅಡ್ಡಪರಿಣಾಮ ಆಗುವ ಎಲ್ಲಾ ಲಕ್ಷಣ ಗೋಚರಿಸ್ತಾಯಿದೆ.ಕುಂದಾಪುರದ ವಾಜಪೇಯಿ ಎಂದೇ ಹೆಸರುಗಳಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಮೂಲ ಬಿಜೆಪಿಗರು ಮತ್ತೆ ತಿರುಗಿ ಬಿದ್ದಿದ್ದಾರೆ.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಸೇರಿದಂತೆ ಏಳು ಪದಾಧಿಕಾರಿಗಳು ರಾಜಿನಾಮೆ ನೀಡಿ ಹಾಲಾಡಿ ವಿರುದ್ದವೇ ಪ್ರಚಾರ ಮಾಡುವ ಶಪಥ ಕೈಗೊಂಡಿದ್ದಾರೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಬಿಜೆಪಿ ತ್ಯಜಿಸಿ ಪಕ್ಷೇತರರಾಗಿ ಬಿಜೆಪಿ ವಿರುದ್ದವೇ ಗೆದ್ದು ಬಂದಿದ್ದರು. ಇದೀಗ ಮತ್ತೆ ವಲಸಿಗರಾಗಿ ಬಿಜೆಪಿ ಸೇರಿರುವ ಹಾಲಾಡಿ ಮತ್ತೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇದೀಗ ಮೂಲ ಕಾರ್ಯಕರ್ತರು ಹಾಲಾಡಿ ವಿರುದ್ಧ ತಿರುಗಿ ಬಿದ್ದಿರುವುದು ಪಕ್ಷಕ್ಕೆ ಮುಳುವಾಗುವುದರಲ್ಲಿ ಸಂಶಯವಿಲ್ಲ.

Leave a Reply

Your email address will not be published. Required fields are marked *