ತಾಯಿ ಐಪಿಎಲ್ ಮ್ಯಾಚ್ ನೋಡಲು ಬಿಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ!

ನ್ಯೂಸ್ ಕನ್ನಡ ವರದಿ-(11.04.18): ದೇಶದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಆತ್ಮಹತ್ಯಾ ಪ್ರಮಾಣವು ಹೆಚ್ಚಾಗುತ್ತಿದೆ. ಮಕ್ಕಳು ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ದುರಂತವೇ ಸರಿ. ಇದೀಗ ಮುಂಬೈನಲ್ಲಿ, ತಾಯಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಮ್ಯಾಚ್ ನೊಡಲು ಬಿಡಲಿಲ್ಲವೆಂದು 18 ವರ್ಷದ ಬಾಲಕ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ, ಬಾಲಕನನ್ನು ನೀಲೇಶ್ ಗುಪ್ತಾ(18) ಎಂದು ಗುರುತಿಸಲಾಗಿದೆ.

ನೀಲೇಶ್ ಗುಪ್ತಾ ಮನೆಯಲ್ಲಿ ಕುಳಿತು ಐಪಿಎಲ್ ಕ್ರಿಕೆಟ್ ನೋಡುತ್ತಿದ್ದ ಸಂದರ್ಭದಲ್ಲಿ ಆತನ ತಾಯಿ, ಮನೆಯ ಟ್ಯಾಂಕ್ ನಲ್ಲಿ ನೀರು ತುಂಬಿದೆಯಾ ನೊಡಿ ಬಾ ಎಂದಿದ್ದರು. ಆದರೆ ನೀಲೇಶ್ ಇದಕ್ಕೆ ಕಿವಿಗೊಟ್ಟಿರಲಿಲ್ಲ. ಬಳಿಕ ತಾಯಿಯೇ ಬಂದು ರಿಮೋಟ್ ಕಿತ್ತುಕೊಂಡು ಸ್ವಿಚ್ ಆಫ್ ಮಾಡಿ ನೀರು ತುಂಬಿದೆಯೆಂದು ನೋಡಲು ತೆರಳಿದ್ದರು. ಮರಳಿ ಬರುವ ವೇಳೆಗೆ ಬಾಗಿಲು ಚಿಲಕ ಹಾಕಿದ್ದು, ಬಳಿಕ ನೀಲೇಶ್ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡದ್ದು ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *