ಕೊನೆಗೂ ಬಂತು ಎಲ್ಲರೂ ಕಾಯುತ್ತಿದ್ದ ವಾಟ್ಸಾಪ್ ನ ಹೊಸ ಫೀಚರ್ ಗಳು!

ನ್ಯೂಸ್ ಕನ್ನಡ ವರದಿ-(11.04.18): ವಾಟ್ಸಾಪ್ ಮೆಸ್ಸೆಂಜರ್ ಈಗ ಪ್ರತಿಯೊಬ್ಬರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ವಾಟ್ಸಾಪ್ ಇಲ್ಲದಿರುವ ವ್ಯಕ್ತಿಗಳಂತೂ ಕಾಣಸಿಗುವುದು ಬಹಳ ವಿರಳ. ಪ್ರತಿಯೊಂದು ಸಂದರ್ಭಗಳಲ್ಲೂ ವಾಟ್ಸಾಪ್ ತನ್ನ ಗ್ರಾಹಕರಿಗಾಗಿ ವಿಶೇಷ ಫೀಚರ್ ಗಳನ್ನು ಅಪ್ಡೇಟ್ ಮಾಡುವ ಅವಕಾಶ ಮಾಡಿಕೊಟ್ಟಿದೆ. ಇದೀಗ ಈ ಬಾರಿ ಕೂಡಾ ವಾಟ್ಸಾಪ್ ಹೊಸ ಮೂರು ಅಪ್ಡೇಟ್ ಗಳನ್ನು ಪರಿಚಯಿಸಿದೆ. ಹಾಗೂ ಇದು ಪ್ರತಿಯೊಬ್ಬರಿಗೂ ಉಪಯುಕ್ತವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

1. ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಕಳಿಸುವಂತಹ ಸೌಲಭ್ಯವಿದೆ. ಈಗೀಗ ಜನರು ಟೆಕ್ಸ್ಟ್ ಮೆಸೇಜ್ ಮಾಡುವುದರ ಬದಲು ವಾಯ್ಸ್ ಮೆಸೇಜ್ ಕಳಿಸುವುದೇ ಹೆಚ್ಚು. ಒಂದು ದೀರ್ಘವಾದ ವಾಯ್ಸ್ ಮೆಸೇಜ್ ಕಳಿಸಬೇಕೆಂದರೆ ಹೆಬ್ಬೆರಳು ನೋಯುವಷ್ಟು ಕಾಲ ಒತ್ತಿ ಹಿಡಿಯಬೇಕಾಗುತ್ತದೆ. ಅದಕ್ಕಾಗಿ ಈ ಹೊಸ ಫೀಚರ್ ಅನ್ನು ವಾಟ್ಸಪ್ ಬಿಡುಗಡೆ ಮಾಡಿದ್ದು, ಒಮ್ಮೆ ಒತ್ತಿ ಹಿಡಿದು ವಾಯ್ಸ್ ಮೆಸೇಜ್ ಲಾಕ್ ಮಾಡಿದರೆ ಸಾಕು. ಮಾತು ಮುಗಿಸಿದ ಕೂಡಲೇ ಅನ್ಲಾಕ್ ಮಾಡಿ ಕಳಿಸಬಹುದಾಗಿದೆ.

2. ಗ್ರೂಪ್ ಟಿಪ್ಪಣಿ: ಇದೀಗ ವಾಟ್ಸಾಪ್ ಗ್ರೂಪ್ ಗಳ ಕುರಿತಾದಂತೆ ಒಂದು ಟಿಪ್ಪಣಿಯನ್ನು ಬರೆಯುವ ಅವಕಾಶವನ್ನು ವಾಟ್ಸಾಪ್ ನ ಹೊಸ ಅಪ್ಡೇಟ್ ಕಲ್ಪಿಸಿದೆ. ಈ ಗ್ರೂಪ್ ಇರುವುದು ಯಾಕೇ? ಇದರ ಅವಶ್ಯಕತೆಗಳೇನು? ನಿಯಮಗಳೇನು? ಇವೆಲ್ಲವನ್ನೂ ಗ್ರೂಪ್ ಡಿಸ್ಕ್ರಿಪ್ಷನ್ ನಲ್ಲಿ ಬರೆಯಬಹುದಾಗಿದೆ.

3. ಗ್ರೂಪ್ ಸರ್ಚ್: ಗ್ರೂಪ್ ನಲ್ಲಿ ಹಲವಾರು ಮಂದಿ ಸದಸ್ಯರಿರುತ್ತಾರೆ. ಮೊದಲು 100 ಜನರನ್ನು ಸೇರಿಸುವ ಅವಕಾಶವಿದ್ದು, ಈಗ ಗ್ರೂಪೊಂದಕ್ಕೆ 256 ಸದಸ್ಯರನ್ನು ಸೇರಿಸಬಹುದಾಗಿದೆ. ನಮಗೆ ಅಗತ್ಯವಿರುವ ವ್ಯಕ್ತಿಗಳನ್ನು ಆ ಪಟ್ಟಿಯಲ್ಲಿ ಹುಡುಕಾಡಲು ಕಷ್ಟವಾಗುತ್ತದೆ. ಆದರೆ ಈಗ ಗ್ರೂಪ್ ನಲ್ಲಿನ ಸದಸ್ಯರನ್ನು ಸರ್ಚ್ ಮಾಡಬಹುದಾಗಿದೆ. ಈ ಎಲ್ಲಾ ಅಪ್ಡೇಟ್ ಗಳು ವಾಟ್ಸಾಪ್ ನ ಬೇಟಾ ಆವೃತ್ತಿಯಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

Leave a Reply

Your email address will not be published. Required fields are marked *