ಆಲಿಯಾ ಭಟ್ ಗೂಢಚಾರಿಣಿ ದೇಶಭಕ್ತೆಯಾಗಿ ಅಭಿನಯಿಸಿದ ‘ರಾಝೀ’ ಸಿನಿಮಾದ ಟ್ರೈಲರ್ ವೀಕ್ಷಿಸಿ!

ಬಾಲಿವುಡ್ ನ ಹಿರಿಯ ನಿರ್ದೇಶಕ ನಿರ್ಮಾಪಕ ಮಹೇಶ್ ಭಟ್ ಪುತ್ರಿ, ‘ಹೈವೆ’ ಹಾಗೂ ‘ಉಡ್ತಾ ಪಂಜಾಬ್​’ ಸಿನಿಮಾಗಳಲ್ಲಿನ ಅಭಿನಯದ ಮೂಲಕ ತನ್ನ ನಟನಾ ಕೌಶಲವನ್ನು ಸಾಬೀತುಪಡಿಸಿರುವ ಅಲಿಯಾ ಭಟ್​ ಈಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಈಗ ರೆರೆ ಮೇಲೆ ಬರಲಿದ್ದಾರೆ. ಅವರ ಬಹು ನಿರೀಕ್ಷಿತ ಸಿನಿಮಾ ‘ರಾಝಿ’ ಟ್ರೇಲರ್​ ಬಿಡುಗಡೆಯಾಗಿದ್ದು, ಸಾಕಷ್ಟು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಟ್ರೇಲರ್​ನಲ್ಲಿ ಕಾಣುವ ಕಥೆಯಂತೆ ಅಲಿಯಾ ಗೂಢಾಚಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ತಿಳಿಯುತ್ತದೆ. ಆದರೆ ‘ಜಗ್ಗಾ ಜಾಸೂಸ್​’ ಅಥವಾ ‘ಬಾಬಿ ಜಾಸೂಸ್​’ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವಂತಹ ಪತ್ತೆದಾರರ ಪಾತ್ರವಲ್ಲ. ಬದಲಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಣಯಲಾಗಿರುವ ಗಂಭೀರ ಕಥೆಯಲ್ಲಿ ಅಲಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *