ಇತರ ಪಕ್ಷಗಳೆಲ್ಲಾ ಕೆಮ್ಮು, ನೆಗಡಿ ಇದ್ದಂತೆ, ಬಿಜೆಪಿ ಪಕ್ಷವು ಕ್ಯಾನ್ಸರ್ ಇದ್ದಂತೆ: ಪ್ರಕಾಶ್ ರೈ

ನ್ಯೂಸ್ ಕನ್ನಡ ವರದಿ-(11.04.18): ಸಾಮಾಜಿಕ ಕಾರ್ಯಕರ್ತೆ ಮತ್ತು ಖ್ಯಾತ ಸಾಹಿತಿ ಗೌರಿ ಲಂಕೇಶ್ ಕೊಲೆಯ ಬಳಿಕ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಸಾಮಾಜಿಕವಾಗಿ ಧ್ವನಿಯೆತ್ತುತ್ತಿದ್ದಾರೆ. ಪ್ರಧಾನಿ ಮೊದಿ ಸರಕಾರದ ಜನವಿರೋಧಿ ನೀತಿಯ ಕುರಿತು ಅವರು ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇದೀಗ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಕಾಶ್ ರೈ, ಬಿಜೆಪಿ ಪಕ್ಷವನ್ನು ಕ್ಯಾನ್ಸರ್ ಖಾಯಿಲೆಗೆ ಹೋಲಿಸಿದ್ದಾರೆ. ಇತರ ಪಕ್ಷಗಳಲೆಲ್ಲಾ ಕೆಮ್ಮು, ನೆಗಡಿ ಇದ್ದಂತೆ, ಆದರೆ ಬಿಜೆಪಿ ಪಕ್ಷ ಮಾತ್ರ ಸಮಾಜಕ್ಕೆ ಹಿಡಿದ ಕ್ಯಾನ್ಸರ್ ಆಗಿದೆ ಎಂದು ಅವರು ಹೇಳಿದರು.

ಜಸ್ಟ್ ಆಸ್ಕಿಂಗ್ ಫೌಂಡೇಶನ್‌’ ಪರವಾಗಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು. 2019ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಬಾರದು’ ಎಂದು ಹೇಳಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ಪರಿಹಾರವಿಲ್ಲದ ಸಮಸ್ಯೆಯಲ್ಲ. ಪಟ್ಟಭದ್ರ ಹಿತಾಸಕ್ತಿಗಾಗಿ ರಾಜಕೀಯ ಪಕ್ಷಗಳು ಮತ್ತು ನಾಯಕರು ಸಮಸ್ಯೆಯನ್ನು ಜೀವಂತ ಇರುವಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *