ಕಾವೇರಿ ಪ್ರತಿಭಟನೆ: ಚೆನ್ನೈಯ ಎಲ್ಲಾ ಪಂದ್ಯಗಳನ್ನು ಸ್ಥಳಾಂತರಿಸಲು ಚಿಂತನೆ!

ನ್ಯೂಸ್ ಕನ್ನಡ ವರದಿ-(11.04.18): ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕೆಂದು ತಮಿಳುನಾಡಿನಲ್ಲಿ ಹಲವು ಸಂಘಟನೆಗಳು, ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ರೈತರು ನೀರಿಲ್ಲದೇ ಕಂಗಾಲಾಗಿದ್ದಾರೆ ಹಾಗೂ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯವನ್ನು ನಡೆಸಬಾರದು ಎಂದು ಪ್ರತಿಭಟನೆ ಮಾಡಿದ್ದರು. ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡಸ್ ್ ತಂಡಗಳ ನಡುವಿನ ಪಂದ್ಯಾಟಕ್ಕೂ ಪ್ರತಿಭಟನೆಯ ಬಿಸಿ ತಾಗಿತ್ತು. ಸೀದಾ ಮೈದಾನಕ್ಕೇ ಪ್ರತಿಭಟನಕಾರರು ಚಪ್ಪಲಿ ಎಸೆದಿದ್ದರು. ಇದೀಗ ಈ ಹಿನ್ನೆಲೆಯಲ್ಲಿ ಚೆನ್ನೈಯಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳನ್ನು ಸ್ಥಳಾಂತರಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಮದು ತಿಳಿದು ಬಂದಿದೆ.

ಕಾವೇರಿ ಪ್ರತಿಭಟನೆ ಬಗ್ಗೆ ಗಮನ ಕೇಂದ್ರಿಕರಿಸುವ ನಿಟ್ಟಿನಲ್ಲಿ ಟಿವಿಕೆ ಸಂಘಟನೆ ಹಾಗೂ ಹೊಸದಾಗಿ ಸ್ಥಾಪನೆಗೊಂಡಿರುವ ತಮಿಳು ನಿರ್ದೇಶಕರ ವೇದಿಕೆಯಿಂದ ಐಪಿಎಲ್ ನಿಷೇಧಿಸಲು ಕರೆ ನೀಡಲಾಗಿತ್ತು . ಹಲವಾರು ತಮಿಳು ಪರ ಸಂಘಟನೆಗಳು ರಸ್ತೆಯಲ್ಲಿ ಧರಣಿ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *