ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಸಂಯೋಜಕರಾಗಿ ಫಾರೂಕ್ ಚಂದ್ರನಗರ ಆಯ್ಕೆ
ನ್ಯೂಸ್ ಕನ್ನಡ ವರದಿ-(11.04.18): ಕಾಪು : ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಸಂಯೋಜಕರಾಗಿ ಮಹಮ್ಮದ್ ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆ.
ರಾಜ್ಯಸಭಾ ಸದಸ್ಯ ಆಸ್ಕರ್ ಪೆರ್ನಾಂಡಿಸ್, ಶಾಸಕ ವಿನಯಕುಮಾರ್ ಸೊರಕೆ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಡಾ.ದೇವಿಪ್ರಸಾದ್ ಶೆಟ್ಟಿ, ರಾಜ್ಯ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಗುಲಾಂ ಮಹಮ್ಮದ್ ಇವರ ಸಹಕಾರದಿಂದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜರವರ ಶಿಫಾರಸಿನಂತೆ ಎಐಸಿಸಿ ಚೆಯರ್ ಮ್ಯಾನ್ ಜನಾಬ್ ಕುರ್ಶೀದ್ ಅಹಮದ್ ಸೈಯ್ಯದ್ ನಿರ್ದೇಶನದ ಮೇರೆಗೆ ರಾಜ್ಯ ಕೆಪಿಸಿಸಿ ಸಮಿತಿ ಅಧ್ಯಕ್ಷ ಜನಾಬ್ ವೈ ಸಯೀದ್ ಅಹ್ಮದ್ ಇವರು ಆಯ್ಕೆ ಮಾಡಿರುತ್ತಾರೆ.