ಮದುವೆ ಸಭಾಂಗಣದಲ್ಲೇ ನೇತ್ರದಾನಕ್ಕೆ ಸಹಿ ಮಾಡಿ ಮಾದರಿಯಾದ ನವ ದಂಪತಿಗಳು!
ನ್ಯೂಸ್ ಕನ್ನಡ ವರದಿ(11-04-2018): ಮದುವೆಯ ಸಭಾಂಗಣದಲ್ಲೇ ವದುವರರು ನೇತ್ರದಾನ ಮಾಡುವ ಕರಾರಿಗೆ ಸಹಿ ಹಾಕಿ ಇತರರಿಗೆ ಮಾದರಿಯಾದ ಘಟನೆ ಧಾರವಾಡದಿಂದ ವರದಿಯಾಗಿದೆ.
ಧಾರವಾಡ ಜಿಲ್ಲೆಯ ನಾಗಯ್ಯ ಹೀರೆಮಠ್ ಹಾಗೂ ಹಾವೇರಿ ಜಿಲ್ಲೆಯ ಪೂಜಾ ಹಿರೇಮಠ್ ಅವರ ವಿವಾಹವು ಇಂದು ಧಾರವಾಡದಲ್ಲಿ ನೆರವೇರಿದ್ದು, ಮದುವೆಯ ವೇದಿಕೆಯಲ್ಲೇ ನೇತ್ರದಾನ ಮಾಡುವ ಕರಾರಿಗೆ ಸಹಿ ಹಾಕುವ ಮೂಲಕ ನವ ವದುವರರು ವಿಶಿಷ್ಟವಾಗಿ ತಮ್ಮ ಮದುವೆ ಸಂಭ್ರಮವನ್ನು ಆಚರಿಸಿದರು.
ಪದವೀದರರಾದ ನಾಗಯ್ಯ ಹಾಗೂ ಪೂಜಾ ಮದುವೆಯ ವೇದಿಕೆಯಲ್ಲಿ ನೇತ್ರದಾನಕ್ಕೆ ಸಹಿ ಹಾಕಿದುದಲ್ಲದೆ, ನೆರೆದಿರುವವರಿಗೆ ನೇತ್ರದಾನದ ಮಹತ್ವದ ಕುರಿತು ವಿವರಿಸಿಕೊಟ್ಟರು. ತಮ್ಮ ನೇತ್ರವನ್ನು ದಾನಮಾಡುವ ಕರಾರಿಗೆ ಸಹಿ ಹಾಕುವ ಮೂಲಕ ನವ ವದುವರರು ಎಲ್ಲರಿಗೂ ಮಾದರಿಯಾಗಿದ್ದಾರೆ.