ಭಾರೀ ಸ್ಪೋಟದ ಸದ್ದಿನಿಂದ ಬೆಚ್ಚಿಬಿದ್ದ ರಿಯಾದ್ ಜನತೆ: ಹೌತಿ ಉಗ್ರರ ಕ್ಷಿಪಣಿಗಳನ್ನು ಹೊಡೆದುರುಳಿಸಿದ ಸೌದಿ ಮಿಲಿಟರಿ

ನ್ಯೂಸ್ ಕನ್ನಡ ವರದಿ(11-04-2018): ಬುಧವಾರ ಸಂಜೆ 5:30ರ ವೇಳೆಗೆ ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನ ಜನತೆ ಆಕಾಶದಲ್ಲಿ ಕೇಳಿ ಬಂದ ಭಾರೀ ಸ್ಪೋಟದ ಸದ್ದಿಗೆ ಒಮ್ಮೆಲೆ ಬೆಚ್ಚಿ ಬಿದ್ದಿತು. ಏನಾಗುತ್ತಿದೆ ಎಂದು ತಿಳಿಯದೆ ತಬ್ಬಿಬ್ಬಾದ ಜನತೆ ನಿಟ್ಟುಸಿರು ಬಿಟ್ಟದ್ದು ಸುದ್ಧಿವಾಹಿನಿಗಳು ಬಿತ್ತರಿಸಿದ ಹೌತಿ ಉಗ್ರರ ಮಿಸೈಲ್ ಸೌದಿ ಸೇನೆಯು ಹೊಡೆದುರುಳಿಸಿದ ಸುದ್ಧಿಯನ್ನು ನೋಡಿದ ನಂತರ.

ಯಮನ್ ಬಂಡುಕೋರ ಹೌತಿ ಉಗ್ರರು ಸತತವಾಗಿ ಸೌದಿ ಅರೇಬಿಯಾದ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಇದು ಇಂದು ಕೂಡ ಮುಂದುವರಿದಿದೆ. ಇಂದು ಬೆಳಿಗ್ಗೆ ಅಭಾ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಹಾಗೂ ಜಿಝಾನ್ ಮಿಲಿಟರಿ ಪ್ರದೇಶವನ್ನು ಗುರಿಯಾಗಿಸಿ ತಲಾ ಒಂದೊಂದು ಕ್ಷಿಪಣಿ ದಾಳಿ ನಡೆಸಿದ ಹೌತಿ ಉಗ್ರರು ಸಂಜೆ ವೇಳೆಗೆ ರಿಯಾದ್ ಜನನಿಬಿಡ ಪ್ರದೇಶಗಳಿಗೆ ಸತತ ಮೂರು ಕ್ಷಿಪಣಿಗಳನ್ವು ಎಸೆಯುವ ಮೂಲಕ ತಮ್ಮ ಅಟ್ಟಹಾಸವನ್ನು ಮುಂದುವರಿಸಿದ್ದಾರೆ. ಎಲ್ಲಾ ಐದು ಕ್ಷಿಪಣಿಗಳನ್ನು ಸೌದಿ ಮಿಲಿಟರಿ ಹೊಡೆದುರುಳಿಸುವ ಮೂಲಕ ಸಾಂಭವ್ಯ ಅಪಾಯವನ್ನು ತಪ್ಪಿಸಿದೆ.

ಸಂಜೆ ವೇಳೆಗೆ ರಿಯಾದ್ ನಗರದ ಆಕಾಶದಲ್ಲಿ ಭಾರೀ ಸ್ಪೋಟದ ಸದ್ದು ಹಾಗೂ ದಟ್ಟವಾದ ಹೊಗೆಯನ್ನು ನೋಡಿ ಜನತೆ ಬೆಚ್ಚಿಬಿದ್ದಿತ್ತು. ಸೌದಿ ಸೇನೆ ಹೊಡೆದುರುಳಿಸಿದ ಬೃಹತ್ ಕ್ಷಿಪಣಿಯ ಅವಶೇಷಗಳು ರಿಯಾದ್ ನಗರದ ದೀರಬ್ ಜನನಿಬಿಡ ಪ್ರದೇಶದಲ್ಲಿ ಬಿದ್ದಿದ್ದು, ಜನರು ಕುತೂಹಲಭರಿತವಾಗಿ ನೋಡುತ್ತಿರುವ ದೃಶ್ಯ ಕಾಣುತ್ತಿದೆ. ಒಟ್ಟಿನಲ್ಲಿ ರಾಜಧಾನಿ ರಿಯಾದ್ ಗೆ ಬಂದೊದಗುತ್ತಿದ್ದ ಅಪಾಯವನ್ನು ಸೌದಿ ಸೇನೆಯು ತಪ್ಪಿಸಿದೆ ಎಂದೇ ಹೇಳಬಹುದು.

Leave a Reply

Your email address will not be published. Required fields are marked *