ಐಪಿಎಲ್ 2018: ಡಕ್ವರ್ತ್ ಲೂಯಿಸ್ ನಿಯಮ ಪ್ರಕಾರ 10 ರನ್ ಗಳ ಗೆಲುವು ಸಾಧಿಸಿದ ರಾಜಸ್ತಾನ ರಾಯಲ್ಸ್!

ನ್ಯೂಸ್ ಕನ್ನಡ ವರದಿ-(12.04.18): ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಪಂದ್ಯದಲ್ಲಿ 203 ರನ್ ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದ ಚೆನ್ನೈ ತಂಡವು ರೋಚಕ ಜಯ ಸಾಧಿಸಿತ್ತು. ಇದೀಗ ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ತಾನ ರಾಯಲ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ನಡುವೆ ಪಂದ್ಯಾಟ ನಡೆಯುತ್ತಿದ್ದು, ಮಳೆಯ ಕಾರಣದಿಂದ ಸ್ಥಗಿತಗೊಂಡಿತ್ತು. ಟಾಸ್ ಗೆದ್ದ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿತು. ಬ್ಯಾಟಿಂಗ್ ಗೆ ಇಳಿದ ರಾಜಸ್ತಾನ ರಾಯಲ್ಸ್ ತಂಡವು ನಾಯಕ ಅಜಿಂಕ್ಯ ರಹಾನೆ ನೆರವಿನಿಂದ 17.5 ಓವರ್ ಗಳಲ್ಲಿ 153-5 ರನ್ ಗಳಿಸಿತ್ತು

ಮೊದಲು ಬ್ಯಾಟಿಂಗ್ ಗೆ ಇಳಿದ ರಾಜಸ್ತಾನ ರಯಲ್ಸ್ ತಂಡವು ಆರಂಭಿಕ ಆಘಾತಕ್ಕೊಳಗಾಯಿತು. ಆರಂಭಿಕ ಬ್ಯಾಟ್ಸ್ ಮನ್ ಗಳಾದ ಶಾರ್ಟ್ ಮತ್ತು ಬೆನ್ ಸ್ಟೋಕ್ಸ್ ಬಹುಬೇಗನೇ ಔಟ್ ಆದರು ಬಳಿಕ ನಾಯಕ ಅಜಿಂಕ್ಯ ರಹಾನೆ(45) ಮತ್ತು ಸಂಜು ಸ್ಯಾಮ್ಸನ್(37) ಉತ್ತಮ ಪ್ರದರ್ಶನ ತೋರಿದರು. ಬಳಿಕ ಬಟ್ಲರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ವೇಳೆಗಾಗಲೇ ಮಳೆ ಬಂದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ಬಳಿಕ ಮಳೆ ಬಂದ ಕಾರಣ ಪಂದ್ಯವನ್ನು ಆರು ಓವರ್ ಗಳಿಗೆ ಸೀಮಿತಗೊಳಿಸಲಾಗಿದ್ದು, ಡೆಲ್ಲಿ ತಂಡಕ್ಕೆ 6 ಓವರ್ ಗಳಲ್ಲಿ 70 ರನ್ ಗಳಿಸಲು ಗುರಿ ನೀಡಲಾಯಿತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಆರಂಬದಿಂದಲೇ ಎಡವಲು ಪ್ರಾರಂಭವಾಯಿತು. ರಾಜಸ್ತಾನ ತಂಡದ ಬೌಲರ್ ಗಳ ಎದುರು ಬಸವಳಿದು ಹೋದ ಡೆಲ್ಲಿ ತಂಡವು ಕೊನೆಗೆ 4 ವಿಕೆಟ್ ಕಳೆದುಕೊಂಡು 60 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂದು ರಆತ್ರಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಪಂದ್ಯ ನಡೆಯಲಿದೆ.

Leave a Reply

Your email address will not be published. Required fields are marked *