ದುಬೈ: ಗೋವಾ ಮೂಲದ ವ್ಯಕ್ತಿ ಸೇರಿದಂತೆ ಇಬ್ಬರಿಗೆ 500 ವರ್ಷ ಜೈಲುಶಿಕ್ಷೆ!

ನ್ಯೂಸ್ ಕನ್ನಡ ವರದಿ-(12.04.18): 200 ದಶಲಕ್ಷ ಡಾಲರ್ ಹಗರಣ ಪ್ರಕರಣದ ತನಿಖೆಯ ತೀರ್ಪು ನೀಡಿದ ದುಬೈ ನ್ಯಾಯಾಲಯವು ಆರೋಪಿಗಳಾದ ಗೋವಾ ಮೂಲದ ಸಿಡ್ನಿ ಲೆಮೋಸ್ ಹಾಗೂ ಆತನ ಲೆಕ್ಕ ಸಹಾಯಕ ರಿಯಾನ್ ಡಿಸೋಜ ಎಂಬವರಿಗೆ 500 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಹಣಕಾಸು ವಂಚನಾ ಜಾಲದಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭಾಂಶದ ಅಮಿಷವೊಡ್ಡಿ ಅನೇಕ ಜನರಿಗೆ ಪಂನಾಮ ಹಾಕಿದ ಲೆಮೋಸ್ ಹಾಗೂ ರಿಯಾನ್ ಆರೋಪಿಗಳೆಂದು ದುಬೈ ಕೋರ್ಟ್ ತೀರ್ಪಿತ್ತಿದೆ. ತಮ್ಮ ಹಣಕಾಸು ಸಂಸ್ಥೆಯಲ್ಲಿ ಸುಮಾರು 25 ಸಾವಿರ ಡಾಲರ್ ಹೂಡಿಕೆ ಮಾಡಿದರೆ ವಾರ್ಷಿಕವಾಗಿ ಶೇಖಡಾ 120ರಷ್ಟು ಲಾಭ ನೀಡಲಾಗುವುದೆಂದು ನಂಬಿಸಿ ಜನರಿಂದ ಹಣ ಪಡೆದ ಇವರು ಕೆಲವು ವರ್ಷ ತಮ್ಮ ಗ್ರಾಹಕರಿಗೆ ಹೇಳಿದಂತೆ ಲಾಭಾಂಶ ವಿತರಿಸಿದ್ದರು. ಆದರೆ ನಂತರ ಅಸಲನ್ನು ಲಾಭವನ್ನೂ ಗ್ರಾಹಕರಿಗೆ ಹಿಂತಿರುಗಿಸದೆ ವಂಚನೆ ಮಾಡಿದ್ದರು.

ಆರೋಪಿ ಲೇಮೊಸ್ ದೊಡ್ಡ ವ್ಯಕ್ತಿಗಳೊಂದಿಗೆ ಸಂಪರ್ಕಹೊಂದಿದ್ದು, ಅನೇಕ ಫುಟ್ಬಾಲ್ ಆಟಗಾರರು, ಕ್ರಿಕೆಟ್ ಆಟಗಾರರು ಹಾಗೂ ಬಾಲಿವುಡ್ ತಾರೆಗಳಿಗೆ ಹತ್ತಿರದ ವ್ಯಕ್ತಿಯಾಗಿದ್ದನೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *