ಪ್ರಧಾನಿ ಮೋದಿ ರೈತರ ಆತ್ಮಹತ್ಯೆಯ ಕುರಿತಾದಂತೆ ಯಾಕೆ ಉಪವಾಸ ಸತ್ಯಾಗ್ರಹ ಮಾಡುತ್ತಿಲ್ಲ: ಒವೈಸಿ

ನ್ಯೂಸ್ ಕನ್ನಡ ವರದಿ-(12.04.18): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಸಂಸದ ಅಸದುದ್ದೀನ್ ಒವೈಸಿ ಆಕ್ರೋಶ ವ್ಯಕ್ತಪಡಿಸುವುದನ್ನು ಮುಂದುವರಿಸಿದ್ದಾರೆ. ಸಂಸತ್ ಕಲಾಪಗಳು ನಡೆಯದೇ ವ್ಯರ್ಥವಾದ ಕಾರಣದಿಂದಾಗಿ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದು, ಪ್ರಧಾನಿಯ ಈ ನಡೆಯನ್ನು ಅಸದುದ್ದೀನ್ ಒವೈಸಿ ಪ್ರಶ್ನಿಸಿದ್ದಾರೆ. ಕಲಾಪಗಳು ನಡೆಯದೇ ಇರುವ ಕಾರಣವನ್ನಿಟ್ಟುಕೊಂಡು ಉಪವಾಸ ಆಚರಿಸುತ್ತಿರುವ ಪ್ರಧಾನಿ ಮೋದಿ ರೈತರ ಆತ್ಮಹತ್ಯೆಯ ಕುರಿತಾದಂತೆ ಯಾಕೆ ಉಪವಾಸ ಸತ್ಯಾಗ್ರಹ ಮಾಡುತ್ತಿಲ್ಲ?ಎಂದು ಪ್ರಶ್ನಿಸಿದ್ದಾರೆ.

ಬಜೆಟ್ ಅಧಿವೇಶನ ಬಲಿಯಾಗಲು ಕಾಂಗ್ರೆಸ್ ಕಾರಣ ಎಂದು ಆಡಳಿತರೂಢ ಬಿಜೆಪಿ ಆರೋಪಿಸಿದ್ದು, ಪ್ರತಿಪಕ್ಷಗಳ ನಡೆಯನ್ನು ಖಂಡಿಸಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್​ ಶಾ ಅವರು ಹಾಗೂ ಬಿಜೆಪಿ ಸಂಸದರೊಂದಿಗೆ ಏಪ್ರಿಲ್​ 12ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಅದೇ ತಮ್ಮ ಸುಳ್ಳು ಭರವಸೆ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಸಾವಿರಾರು ರೈತರ ಆತ್ಮಹತ್ಯೆಗೆ ಶರಣಾಗಿದ್ದಾರೆ ಅವರಿಗಾಗಿ ಮೋದಿ ಅವರು ಉಪವಾಸ ಸತ್ಯಾಗ್ರಹ ಮಾಡುವುದಿಲ್ಲ ಎಂದು ಓವೈಸಿ ಹೇಳಿದ್ದಾರೆ.

Leave a Reply

Your email address will not be published. Required fields are marked *