ಮೋದಿ ಅಲೆ ಕರ್ನಾಟಕದಲ್ಲಿ ವರ್ಕೌಟ್ ಆಗುವುದು ಕಷ್ಟ: ನಿಪ್ಪಾಣಿ ಬಿಜೆಪಿ ಅಭ್ಯರ್ಥಿಯ ಪತಿ!
ನ್ಯೂಸ್ ಕನ್ನಡ ವರದಿ(12-04-2018): ನಿಪ್ಪಾಣಿ ತ್ಷೇತ್ರದಲ್ಲಿ ಬಿಜೆಪಿ ಜಯಗಳಿಸುವುದು ಖಚಿತ ಆದರೆ ಕರ್ನಾಟಕದಲ್ಲಿ ಮೋದಿ ಅಲೆ ವರ್ಕೌಟ್ ಆಗೋದು ಕಷ್ಟ ಎಂದು ನಿಪ್ಪಾಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೋದಿ ಅಲೆ ಹಿಂದಿಗಿಂತ ಸ್ವಲ್ಪ ಹೆಚ್ಚಿದೆ. ಹಾಗಂತ ಮೋದಿ ಅಲೆಯಲ್ಲಿ ನೂರಕ್ಕೆ ನೂರು ಗೆಲ್ಲುವುದು ಕಷ್ಟ. ನಾವು ಸುಮ್ಮನೆ ಕುಳಿತುಕೊಂಡರೆ ಮೋದಿ ಅಲೆ ವರ್ಕ್ ಔಟ್ ಆಗುವುದು ಡೌಟು. ಕ್ಷೇತ್ರದಲ್ಲಿ ನಾವು ಮಾಡಿದ ಆಭಿವೃದ್ಧಿ ಕಾರ್ಯಗಳನ್ವು ಮುಂದಿಟ್ಟು ಮತ ಯಾಚಿಸುತ್ತೇವೆ. ನನ್ನ ಪತ್ನಿಗೆ ಆಕೆಯ ಅಭಿವಯದ್ಧಿ ಕಾರ್ಯಗಳೇ ಶ್ರೀರಕ್ಷೆಯಾಗಲಿದೆ ಎಂದರು.
ಇತ್ತೀಚೆಗೆ ಬಿಜೆಪಿ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪ್ರಥಮ ಪಟ್ಟಿಯಲ್ಲಿ ನಿಪ್ಪಾಣಿ ಕ್ಷೇತ್ರದಿಂದ ಅಣ್ಣಾಸಾಹೆಬ್ ಜೊಲ್ಲೆಯವರ ಪತ್ನಿ ಶಶಿಕಲಾ ಜೊಲ್ಲೆ ಅವರಿಗೆ ಟಿಕೆಟ್ ದೊರತಿದೆ.