ಕೆಕೆಆರ್ ಸೋಲಿಗೆ ತನ್ನನ್ನು ಟೀಕಿಸಿದವರಿಗೆ ಕನ್ನಡಿಗ ವಿನಯ್ ಕುಮಾರ್ ಕೊಟ್ಟ ಖಡಕ್ ಉತ್ತರ ಓದಿ!

ನ್ಯೂಸ್ ಕನ್ನಡ ವರದಿ: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಮೆಂಟ್ ಎಂದೇ ಹೆಸರುವಾಸಿಯಾದ ಐಪಿಎಲ್ ನಲ್ಲಿ ಕೋಲ್ಕತ ನೈಟ್’ರೈಡರ್ಸ್ ವೇಗದ ಬೌಲರ್ ಕನ್ನಡಿಗ ವಿನಯ್ ಕುಮಾರ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಅಂತಿಮ ಓವರ್’ನಲ್ಲಿ 17 ರನ್’ಗಳನ್ನು ರಕ್ಷಿಸಿಕೊಳ್ಳಲು ವಿಫಲವಾದ ವಿನಯ್ ಕುಮಾರ್ ಮೇಲೆ ಕೆಕೆಆರ್ ಕ್ರಿಕೆಟ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಚೆನ್ನೈ ಸೂಪರ್’ಕಿಂಗ್ಸ್ ತಂಡವು ಕೊನೆಯ ಓವರ್’ನಲ್ಲಿ ಗೆಲ್ಲಲು 17 ರನ್’ಗಳ ಅವಶ್ಯಕತೆಯಿತ್ತು. ಕೊನೆಯ ಓವರ್’ನ ಬೌಲಿಂಗ್ ಮಾಡಿದ ವಿನಯ್ ಮೊದಲ ಎಸೆತದಲ್ಲೇ ನೋಬಾಲ್ ಹಾಕಿ ಸಿಕ್ಸರ್ ಬಿಟ್ಟುಕೊಟ್ಟರು. ಕೊನೆಯ ಎರಡು ಎಸೆತದಲ್ಲಿ ಸಿಎಸ್’ಕೆಗೆ ಗೆಲ್ಲಲು 4 ರನ್’ಗಳ ಅವಶ್ಯಕತೆಯಿತ್ತು. ಆಗ ರವೀಂದ್ರ ಜಡೇಜಾ ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಕೆಕೆಆರ್ ಅಭಿಮಾನಿಗಳು ವಿನಯ್ ಕುಮಾರ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದಾದ ಬಳಿಕ ಟೀಕಾಕಾರರಿಗೆ ವಿನಯ್ ಕುಮಾರ್ ಟ್ವೀಟ್’ನಲ್ಲೇ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಪಂದ್ಯವಷ್ಟೇ ಹಾಗಾಗಿ ಇರಲಿ ಬಿಡಿ. ನಾನು ಆರ್’ಸಿಬಿ ವಿರುದ್ಧ 9 ರನ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ 10 ರನ್’ಗಳನ್ನು ಉತ್ತಮ ರೀತಿಯಲ್ಲೇ ನಿಯಂತ್ರಣ ಮಾಡಿಕೊಂಡಾಗ ನೀವೆಲ್ಲಿ ಹೋಗಿದ್ರಿ? ಕೆಲವೊಮ್ಮೆ ತಪ್ಪುಗಳಾಗುತ್ತವೆ, ಕ್ರೀಡೆಯನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಿ ಎಂದು ಟ್ವೀಟ್ ಮಾಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಇವರಿಗೆ ಬೆಂಬಲವಾಗಿ ನಿಂತ ಭಾರತ ತಂಡದ ಮಾಜಿ ವೇಗಿ ಇರ್ಫಾನ್ ಪಠಾಣ್,  ಹೌದು ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ನಿನ್ನ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಅದೃಷ್ಟ ನಿನ್ನ ಜೊತೆ ಇರಲಿ ಗೆಳೆಯ ಎಂದು ಶುಭಕೋರಿದ್ದಾರೆ. ಅದಕ್ಕೆ ವಿನಯ್ ಕುಮಾರ್ ಧನ್ಯವಾದವೂ ರೀಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *