ಕರ್ನಾಟಕದಲ್ಲಿ ಎಂಇಪಿ ಪಕ್ಷವು 150 ಸ್ಥಾನಗಳನ್ನು ಗೆಲ್ಲಲಿದೆ: ನೌಹೀರಾ ಶೇಖ್
ನ್ಯೂಸ್ ಕನ್ನಡ ವರದಿ-(12.04.18): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸದ್ಯ ಹೊಸದೊಂದು ಪಕ್ಷವು ಸೇರ್ಪಡೆಯಾಗಿದ್ದು, ನೌಹೀರಾ ಶೇಖ್ ನೇತೃತ್ವದ ಮಹಿಳಾ ಎಂಪವರ್ ಮೆಂಟ್ ಪಕ್ಷವು ಕರ್ನಾಟಕ ಚುನಾವಣೆಯಲ್ಲಿ 150 ಸೀಟುಗಳನ್ನು ಗಳಿಸಲಿದೆ ಎಂದು ನೌಹೀರಾ ಶೇಖ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ನಡೆಸ ಸಮಾರಂಭದಲ್ಲಿ ಪಕ್ಷದ ಪ್ರಣಾಳಿಕೆಯನ್ನು ನೌಹೀರಾ ಶೇಖ್ ಬಿಡುಗಡೆ ಮಾಡಿದರು. ಕೆಲವು ಸಮೀಕ್ಷೆಗಳ ಪ್ರಕಾರ 70 ಸೀಟುಗಳ ಬರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಬಹುಮತ ಪಡೆದುಕೊಂಡು ನಾವೇ ಅಧಿಕಾರಕ್ಕೆ ಬರಲಿದ್ದೇವೆ ಎಂದು ಅವರು ಹೇಳಿದರು.
ಸಮಾಜದಲ್ಲಿನ ನಿರ್ಗತಿಕ ಮತ್ತು ತುಳಿತಕ್ಕೊಳಗಾದ ಜನರನ್ನು ಅಭಿವೃದ್ಧಿಪಡಿಸುವುದು ಪಕ್ಷದ ಪ್ರಮುಖ ಗುರಿಯಾಗಿದೆ. ಧ್ವನಿಯಿಲ್ಲದ ಮಹಿಳೆಯರಿಗೆ ಧ್ವನಿಯಾಗುವುದು ಮತ್ತು ಸಮಾಜದಲ್ಲಿ ತಾರತಮ್ಯ ಎದುರಿಸುತ್ತಿರುವ ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರ ಏಳಿಗೆ ನಮ್ಮ ಆದ್ಯತೆಯಾಗಿದೆ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಹೇಳಿದರು.
ಪ್ರಣಾಳಿಕೆ:
– ರೈತರ ಎಲ್ಲ ಕೃಷಿ ಸಾಲ ಮತ್ತು ಬಡ್ಡಿ ಮನ್ನಾ, ಬೆಂಬಲ ಬೆಲೆ, ಸೂಕ್ತ ಮಾರುಕಟ್ಟೆ
– ಸೌರವಿದ್ಯುತ್ ಉತ್ಪಾದನೆಯಲ್ಲಿ ಭಾಗಿಯಾಗಲು ರೈತರಿಗೆ ಪ್ರೋತ್ಸಾಹ
– ಕೃಷಿ, ಗುಡಿ ಕೈಗಾರಿಕೆ ಆಧಾರಿತ ಉದ್ಯಮ ಸ್ಥಾಪನೆಗೆ ಬಡ್ಡಿ ರಹಿತ ಸಾಲ
– ಎಲ್ಕೆಜಿಯಿಂದ ಪಿಜಿ ವರೆಗೆ ಉಚಿತ ಶಿಕ್ಷಣ, ಪ್ರತಿ 10 ಲಕ್ಷ ಉದ್ಯೋಗ ಸೃಷ್ಟಿ
– ಬಿಪಿಎಲ್ ಕುಟುಂಬಗಳಿಗೆ ಡಬಲ್ ಬೆಡ್ರೂಂ ಮನೆ
– ಪ್ರತಿ ಹಳ್ಳಿಯಲ್ಲಿ ಜೈವಿಕ ಅನಿಲ ಕೇಂದ್ರ ಸ್ಥಾಪನೆ
– ಅಪರಾಧಿಗಳ ಪತ್ತೆಗೆ ಇ-ಟೆಕ್ನಾಲಜಿ ಬಳಕೆ
– ಆಧಾರ್ ಸಂಪರ್ಕ ಹೊಂದಿರುವ ಜಾನುವಾರುಗಳಿಗೆ ಹೆಲ್ತ್ ಕಾರ್ಡ್